ಸಾರಾಂಶ
ದುಬೈ: ಐಸಿಸಿ ವಿಶ್ವ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು ತಮ್ಮ ಪ್ರಾಬಲ್ಯ ಹೆಚ್ಚಿಸಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ-10ರಲ್ಲಿ ಆಸ್ಟ್ರೇಲಿಯಾದ ಐವರು ಬೌಲರ್‌ಗಳು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 1958ರಲ್ಲಿ ಅಗ್ರ-12ರಲ್ಲಿ ಇಂಗ್ಲೆಂಡ್‌ನ ಆರು ಬೌಲರ್‌ಗಳಿದ್ದರು. ನೂತನ ಪಟ್ಟಿಯಲ್ಲಿ ಜಸ್‌ಪ್ರೀತ್ ಬೂಮ್ರಾ 901 ರೇಟಿಂಗ್ ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ದ.ಆಫ್ರಿಕಾದ ಕಗಿಸೊ ರಬಾಡ(851 ಅಂಕ) 2ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಹಾಗೂ ಹೇಜಲ್‌ವುಡ್ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದು, ಸ್ಕಾಟ್ ಬೋಲಂಡ್ 6 ಸ್ಥಾನ ಮೇಲೇರಿ 6ನೇ ಸ್ಥಾನಕ್ಕೇರಿದ್ದಾರೆ. ಸ್ಪಿನ್ನರ್ ನೇಥನ್ ಲಯನ್ 8ನೇ ಸ್ಥಾನಕ್ಕೆ ಕುಸಿದಿದ್ದರೆ, ಮಿಚೆಲ್ ಸ್ಟಾರ್ಕ್ 10ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ರೂಟ್ ಅಗ್ರಸ್ಥಾನಿ: ಬ್ಯಾಟರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಹಿರಿಯ ಆಟಗಾರ ಜೋ ರೂಟ್ ಮತ್ತೆ ಅಗ್ರಸ್ಥಾನಕ್ಕೇರಿದ್ದು, ಹ್ಯಾರಿ ಬ್ರೂಕ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಯಶಸ್ವಿ ಜೈಸ್ವಾಲ್ 5, ರಿಷಭ್ ಪಂತ್ 8, ಶುಭ್‌ಮನ್ ಗಿಲ್ 9ನೇ ಸ್ಥಾನಗಳಲ್ಲಿದ್ದಾರೆ. ಈ ಮೂವರೂ ತಲಾ ಒಂದೊಂದು ಸ್ಥಾನ ಕುಸಿದಿದ್ದಾರೆ.