ಸಾರಾಂಶ
ಪ್ಯಾರಿಸ್: ಚೊಚ್ಚಲ ಬಾರಿ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಗೆಲ್ಲುವ ಕಾತರದಲ್ಲಿರುವ ಯುವ ತಾರೆ ಕಾರ್ಲೊಸ್ ಆಲ್ಕರಜ್ ಹಾಗೂ ಎಲೆನಾ ರಬೈಕೆನಾ ಟೂರ್ನಿಯಲ್ಲಿ 4ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ 3ನೇ ಸುತ್ತಿನಲ್ಲಿ ಸ್ಪೇನ್‌ನ 21ರ ಆಲ್ಕರಜ್ ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ವಿರುದ್ಧ 6-4, 7-6(7/5), 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 9ನೇ ಶ್ರೇಯಾಂಕಿತ ಗ್ರೀಸ್‌ನ ಸ್ಟೆಫಾನೊಸ್ ಸಿಟ್ಸಿಪಾಸ್ ಚೀನಾದ ಝಾಂಗ್ ಝಿಝೆನ್‌ರನ್ನು 6-3, 6-3, 6-1ರಲ್ಲಿ ಸೋಲಿಸಿ 4ನೇ ಸುತ್ತಿಗೇರಿದರು.
5ನೇ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್, 2ನೇ ಶ್ರೇಯಾಂಕಿತ ಜಾನಿಕ್ ಸಿನ್ನರ್ ಕೂಡಾ 3ನೇ ಸುತ್ತಿನಲ್ಲಿ ಗೆಲುವು ಸಾಧಿಸಿದರು.ಶನಿವಾರ ಮಹಿಳಾ ಸಿಂಗಲ್ಸ್ 3ನೇ ಸುತ್ತಿನಲ್ಲಿ 4ನೇ ಶ್ರೇಯಾಂಕಿತ, ಕಜಕಸ್ತಾನದ ರಬೈಕೆನಾ, ಬೆಲ್ಜಿಯಂನ ಎಲೈಸ್ ಮೆರ್ಟೆನ್ಸ್ ವಿರುದ್ಧ 6-4, 6-2ರಲ್ಲಿ ಗೆದ್ದರು. ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ಬೆಲಾರಸ್‌ನ ರಬೈಕೆನಾ ಸ್ಪೇನ್‌ನ ಪಾಲಾ ಬಡೋಸಾ ವಿರುದ್ಧ 7-5, 6-1ರಲ್ಲಿ ಜಯಭೇರಿ ಬಾರಿಸಿದರು.
ಶ್ರೀರಾಮ್ ಪ್ರಿ ಕ್ವಾರ್ಟರ್‌ಗೆ
ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಮೆಕ್ಸಿಕಾದ ವೆರೆಲಾ ಮಾರ್ಟಿನೆಜ್ ಜೊತೆಗೂಡಿ ಕಣಕ್ಕಿಳಿದಿರುವ ಭಾರತದ ಶ್ರೀರಾಮ್ ಬಾಲಾಕಿ ಪ್ರಿ ಕ್ವಾರ್ಟರ್ ಫೈನಲ್‌ಗೇರಿದರು. ಶನಿವಾರ 2ನೇ ಸುತ್ತಿನ ಪಂದ್ಯದಲ್ಲಿ ಭಾರತ-ಮೆಕ್ಸಿಕೋ ಜೋಡಿಗೆ ಫ್ರಾನ್ಸ್‌ನ ಡ್ಯಾನ್ ಆ್ಯಡೆಡ್-ಥಿಯೊ ಆರಿಬಾಜ್ ವಿರುದ್ಧ 6-4, 3-6, 6-2ರಲ್ಲಿ ಗೆಲುವು ಲಭಿಸಿತು.