ಸಾರಾಂಶ
ಬೆಂಗಳೂರು: ಬೆಂಗಳೂರಿನ ಶಾಲಾ ಕ್ರೀಡಾಪಟುಗಳ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸಿದ್ದ SFA ಚಾಂಪಿಯನ್‌ಶಿಪ್ ತೆರೆ ಬಿದ್ದಿದೆ.25 ಚಿನ್ನ, 19 ಬೆಳ್ಳಿಮತ್ತು 24 ಕಂಚಿನ ಪದಕಗಳನ್ನುಪಡೆದುಕೊಂಡು ಬೆಂಗಳೂರು ಪೂರ್ವದ ನಂಬರ್ ಒನ್ ಸ್ಕೂಲ್ ಇನ್ ಸ್ಪೋರ್ಟ್ಸ್ ಎಂಬ ಪ್ರಶಸ್ತಿಯನ್ನು ದೆಹಲಿ ಪಬ್ಲಿಕ್ ಸ್ಕೂಲ್ ಪಡೆದುಕೊಂಡಿದೆ.1 ನೇ ರನ್ನರ್ ಅಪ್ ಸ್ಥಾನವನ್ನು ಎಲೆಕ್ಟ್ರಾನಿಕ್ ಸಿಟಿಯ ಡೆಲ್ಲಿ ಪಬ್ಲಿಕ್ ಸ್ಕೂಲ್ ಶಾಲೆ ಪಡೆದುಕೊಂಡಿತು. ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಬನ್ನೇರುಘಟ್ಟದ ಗ್ರೀನ್ ವುಡ್ (ಐಸಿಎಸ್ಇ) ಶಾಲೆ ತನ್ನದಾಗಿಸಿಕೊಂಡಿದೆ.ಬೆಂಗಳೂರಿನ ಎಸ್ಎಐ ಎಕ್ಸಲೆನ್ಸ್ ಸೆಂಟರ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ರಿತು ಪಥಿಕ್, ಎಸ್ಎಫ್ಎ ಚಾಂಪಿಯನ್‌ಶಿಪ್‌ಗಳು ಕ್ರೀಡಾ ಪ್ರತಿಭೆಯನ್ನು ಬೆಳೆಸುವಲ್ಲಿ ಸಹಾಯಕಾರಿಯಾಗಿದೆ. ಸಮರ್ಪಿತ ಪ್ರಯತ್ನಕ್ಕೆ ನನ್ನ ಹೃತ್ಪೂರ್ವಕ ಮೆಚ್ಚುಗೆಯನ್ನುವ್ಯಕ್ತಪಡಿಸುತ್ತೇನೆ. ತಳಮಟ್ಟದ ಕ್ರೀಡೆಗಳಿಗೆ ಸುಸ್ಥಿರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಅವರ ಬದ್ಧತೆಯು ಪ್ರತಿಕ್ರೀಡಾಪಟುವಿಗೆ ಉತ್ತಮ ಸಾಧನೆ ಮಾಡಲು ಅವಕಾಶವನ್ನು ಕಲ್ಪಿಸಿಕೊಡುತ್ತದೆ ಎಂದರು.