ಸಾರಾಂಶ
ಬೆಂಗಳೂರು: ಬೆಂಗಳೂರಿನಲ್ಲಿ ಎಸ್‌ಎಫ್ಎ ಚಾಂಪಿಯನ್‌ಶಿಪ್‌ನ 1ನೇ ಆವೃತ್ತಿಗೆ ಗುರುವಾರ ತೆರೆ ಬೀಳಲಿದ್ದು. ಸಮಾರೋಪ ಸಮಾರಂಭದಲ್ಲಿ ನಂಬರ್ 1 ಶಾಲೆ ಯಾವುದು ಎಂದು ಘೋಷಣೆಯಾಗಲಿದೆ. ಗೋಲ್ಡನ್ ಬಾಯ್'''' ಮತ್ತು'''' ಗೋಲ್ಡನ್ ಗರ್ಲ್ ಪ್ರಶಸ್ತಿಗಳನ್ನು ಕೂಡಾ ನೀಡಲಾಗುತ್ತಿದೆ. ಜೊತೆಗೆ ಬಹು-ಕ್ರೀಡೆಗಳಲ್ಲಿ ಸ್ಥಾನಗಳನ್ನುಗೆದ್ದ ಯುವ ಕ್ರೀಡಾಪಟುಗಳನ್ನುಗುರುತಿಸಿ ಗೌರವಿಸಲಾಗುತ್ತದೆ.
ಎಸ್‌ಎಫ್ಎ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿ 11ನೇ ದಿನ ನಗರದ ಉದಯೋನ್ಮುಖ ಕ್ರೀಡಾಪಟುಗಳು ಚೆಸ್, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಖೋ-ಖೋ ಮತ್ತು ಇತ್ಯಾದಿ ಕ್ರೀಡೆಗಳಲ್ಲಿ ತಮ್ಮಕೌಶಲ್ಯವನ್ನು ಪ್ರದರ್ಶಿಸಿದರು.ಖೋ-ಖೋ ಸ್ಪರ್ಧೆಗಳು ಅಂಡರ್-14 ಬಾಲಕ, ಬಾಲಕಿಯರ, ಅಂಡರ್-18 ಬಾಲಕರ ವಿಭಾಗದ ಸ್ಪರ್ಧೆಗಳು ಪೈಪೋಟಿಯಿಂದ ನಡೆದವು.ಈ ರೋಮಾಂಚಕ ಕ್ರೀಡಾ ವಾತಾವರಣದಲ್ಲಿ, ದೆಹಲಿ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳು ಅಥ್ಲೆಟಿಕ್ಸ್, ಚೆಸ್, ಕರಾಟೆ, ಥ್ರೋಬಾಲ್ ಮತ್ತು ವಾಲಿಬಾಲ್‌ಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಯಲಹಂಕದ ವಿದ್ಯಾಶಿಲ್ಪ ಅಕಾಡೆಮಿಯು ಬಾಸ್ಕೆಟ್‌ಬಾಲ್, ಈಜು, ಟೇಬಲ್ ಟೆನಿಸ್ ಮತ್ತು ವಾಲಿಬಾಲ್‌ನಲ್ಲಿ ಉತ್ತಮ ಪ್ರದರ್ಶಿನ ನೀಡಿತು.ಅಂಡರ್-16 ಹುಡುಗರು ಮತ್ತು ಹುಡುಗಿಯರ ಬಾಸ್ಕೆಟ್‌ಬಾಲ್ ಫೈನಲ್‌ಗಳು ಪ್ರೇಕ್ಷಕರನ್ನು ಆಸನಗಳ ತುದಿಯಲ್ಲಿ ಕೂರುವಂತೆ ಮಾಡಿದವು. ಅಂಡರ್-10, ಅಂಡರ್-12, ಮತ್ತು ಅಂಡರ್-14 ವಿಭಾಗಗಳಲ್ಲಿ ಫುಟ್‌ಬಾಲ್ ಪಂದ್ಯಗಳು ರೋಮಾಂಚಕವಾಗಿದ್ದವು. ಅಂಡರ್-14, ಅಂಡರ್-16 ಮತ್ತು ಅಂಡರ್-18 ವಿಭಾಗಗಳಲ್ಲಿ ಫುಟ್‌ಬಾಲ್‌ನ ಸ್ಪರ್ಧೆಗಳು ನಿರೀಕ್ಷೆಯನ್ನುಹೆಚ್ಚಿಸಿವೆ.