ಸಾರಾಂಶ
ಬೆಂಗಳೂರು: ಇಲ್ಲಿನ ಪಡುಕೋಣೆ ದ್ರಾವಿಡ್ ಕ್ರೀಡಾ ಅಕಾಡೆಮಿಯಲ್ಲಿ ನಡೆಯುತ್ತಿರುವ ಎಸ್‌ಎಫ್‌ಎ ಚಾಂಪಿಯನ್‌ಶಿಪ್‌ನ 3ನೇ ದಿನ ಅಥ್ಲೆಟಿಕ್ಸ್ ಜೊತೆಗೆ ಟೆನಿಸ್ ಹಾಗೂ ಫುಟ್ಬಾಲ್ ಪಂದ್ಯಗಳನ್ನು ಆಡಿಸಲಾಯಿತು. ಸುಮಾರು 550ಕ್ಕೂ ಹೆಚ್ಚು ಕ್ರೀಡಾಪಟುಗಳು 3 ಕ್ರೀಡೆಗಳಲ್ಲಿ ಪಾಲ್ಗೊಂಡರು. ಅಥ್ಲೆಟಿಕ್ಸ್‌ನಲ್ಲಿ ಅಂಡರ್-8 ಹಾಗೂ ಅಂಡರ್-12 ವಿಭಾಗಗಳಲ್ಲಿ ಲಾಂಗ್‌ಜಂಪ್, ಹೈಜಂಪ್, ರಿಲೇ ಓಟದ ಸ್ಪರ್ಧೆಗಳು ನಡೆಯಿತು. ಫುಟ್ಬಾಲ್‌ನಲ್ಲಿ ಅಂಡರ್-14, ಅಂಡರ್-16 ವಿಭಾಗದ ಸ್ಪರ್ಧೆಗಳು ಆಯೋಜನೆಗೊಂಡವು. 4ನೇ ದಿನವಾದ ಶುಕ್ರವಾರ ಬ್ಯಾಡ್ಮಿಂಟನ್, ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ಪಂದ್ಯಗಳು ನಡೆಯಲಿವೆ. ಯಲಹಂಕದ ವಿದ್ಯಾಶಿಲ್ಪ್ ಅಕಾಡೆಮಿಯ ಅನನ್ಯಾ ನಟರಾಜನ್ 300 ಮೀ ಓಟದಲ್ಲಿ 56.06 ಸೆಕೆಂಡುಗಳಲ್ಲಿ ತಲುಪಿ 12 ವರ್ಷದೊಳಗಿನ ಮಹಿಳಾ ಅಥ್ಲೀಟ್‌ಗಳ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದರು. ಇದೇ ವಿಭಾಗದಲ್ಲಿ ವೈಟ್‌ಫೀಲ್ಡ್‌ನ ಯುರೋ ಶಾಲೆಯ ಪ್ರಗನ್ಯದೀಪ್ತಿ ಪ್ರದೀಪ್ ಬೆಳ್ಳಿ ಹಾಗೂ ಹರ್ಲೂರಿನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಪರ್ಮಿತಾ ಲಾಡೆ ಕಂಚಿನ ಪದಕ ಪಡೆದರು. ಫುಟ್ಬಾಲ್ ಬಾಲಕರ ವಿಭಾಗದಲ್ಲಿ ಬನ್ನೇರುಘಟ್ಟದ ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಶನಲ್ ಸ್ಕೂಲ್, ರಾಜಾಜಿನಗರದ ಕೆಎಲ್‌ಇ ಸೊಸೈಟಿ ಶಾಲೆಯ ವಿರುದ್ಧ 4-0 ಅಂತರದಲ್ಲಿ ಅಜೇಯ ಸ್ಕೋರ್‌ನೊಂದಿಗೆ ಜಯಗಳಿಸಿತು.