ಪಂದ್ಯದ ವೇಳೆ ಈಡನ್ ಗಾರ್ಡನ್ಸ್‌ನಲ್ಲಿ ಶಾರುಖ್‌ ಖಾನ್‌ ಸ್ಮೋಕಿಂಗ್‌!

| Published : Mar 25 2024, 12:47 AM IST / Updated: Mar 25 2024, 03:43 PM IST

ಸಾರಾಂಶ

ಶಾರುಖ್‌ ಧೂಮಪಾನ ಮಾಡಿದ್ದು ನಿಜವೇ ಎಂಬುದು ಖಚಿತವಿಲ್ಲ. ಆದರೆ ಸಾಮಾಜಿಕ ತಾಣಗಳಲ್ಲಿ ಹಲವರು ಶಾರುಖ್‌ ಸ್ಮೀಕ್‌ ಮಾಡಿದ್ದಾಗಿ ದೂರಿದ್ದಾರೆ. ಅವರ ವರ್ತನೆಗೆ ಹಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಕೋಲ್ಕತಾ: ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್‌ ಪಂದ್ಯದ ವೇಳೆ ಕೋಲ್ಕತಾ ಮಾಲಿಕ, ಖ್ಯಾತ ನಟ ಶಾರುಖ್ ಖಾನ್ ಅವರು ಧೂಮಪಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದರ ಕುರಿತು ಸಾಮಾಜಿಕ ತಾಣಗಳಲ್ಲಿ ಫೋಟೋ, ವಿಡಿಯೋಗಳು ವೈರಲ್ ಆಗಿದ್ದು, ಟೀಕೆಗೆ ಕಾರಣವಾಗಿದೆ.ಪಂದ್ಯದ ವೇಳೆ ಕ್ರೀಡಾಂಗಣದಲ್ಲಿನ ವಿಐಪಿ ಬಾಕ್ಸ್‌ನಲ್ಲಿದ್ದ ಶಾರುಖ್‌ ಖಾನ್‌ರ ಸ್ಮೋಕಿಂಗ್‌ ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. 

ಆದರೆ ಇದರ ಸತ್ಯಾಸತ್ಯತೆ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಅವರು ಧೂಮಪಾನ ಮಾಡಿದ್ದು ನಿಜವೇ ಎಂಬುದು ಖಚಿತವಿಲ್ಲ. ಆದರೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಂದ್ಯದ ವೇಳೆ ಅವರ ವರ್ತನೆಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಫೈನಲ್‌ ಪಂದ್ಯದ ವೇಳೆ ಪಾಕ್‌ನ ಆಲ್ರೌಂಡರ್‌ ಇಮಾದ್ ವಾಸಿಮ್ ಕೂಡ ಡ್ರೆಸ್ಸಿಂಗ್ ಕೋಣೆಯಲ್ಲಿ ಸಿಗರೇಟ್‌ ಸೇದಿದ್ದರು. 

ಇದರ ವಿಡಿಯೋಗಳು ವ್ಯಾಪಕವಾಗಿ ಹರಿದಾಡಿತ್ತು. ಇನ್ನು ಶನಿವಾರದ ಪಂದ್ಯದಲ್ಲಿ ಹೈದ್ರಾಬಾದ್‌ ವಿರುದ್ಧ ಕೋಲ್ಕತಾ 4 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. 

ಅನುಭವಿ ಆ್ಯಂಡ್ರೆ ರಸೆಲ್ ಅವರ ಅಬ್ಬರದ ಅರ್ಧಶತಕ, ಮತ್ತು ಫಿಲ್ ಸಾಲ್ಟ್ ಆಕರ್ಷಕ ಅರ್ಧಶತಕದ ನೆರವಿನಿಂದ ಕೋಲ್ಕತಾ 7 ವಿಕೆಟ್ ನಷ್ಟಕ್ಕೆ 208 ರನ್‌ ಗಳಿಸಿತ್ತು.

ದೊಡ್ಡ ಗುರಿ ಬೆನ್ನತ್ತಿದ್ದ ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ ಸೋಲೊಪ್ಪಿಕೊಂಡಿತು.