ಸಾರಾಂಶ
ಅನಂತಪುರ: ಈ ಬಾರಿ ದುಲೀಪ್ ಟ್ರೋಫಿ ಗೆಲ್ಲುವ ರೇಸ್‌ನಲ್ಲಿರುವ ಭಾರತ ‘ಎ’ ತಂಡ ಗುರುವಾರ ಆರಂಭಗೊಂಡ ಭಾರತ ‘ಸಿ’ ತಂಡದ ವಿರುದ್ಧದ ಕೊನೆ ಪಂದ್ಯದಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದೆ. ಆರಂಭಿಕ ಆಘಾತಕ್ಕೊಳಗಾಗಿದ್ದ ತಂಡ ಶಾಶ್ವತ್ ರಾವತ್ ಆಕರ್ಷಕ ಶತಕದ ನೆರವಿನಿಂದ ಮೊದಲ ದಿನದಂತ್ಯಕ್ಕೆ 7 ವಿಕೆಟ್‌ಗೆ 224 ರನ್ ಕಲೆಹಾಕಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ‘ಎ’ ತಂಡ 7ನೇ ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಪ್ರಥಮ್ ಸಿಂಗ್ 6 ರನ್‌ಗೆ ಔಟಾದರು. ಅವರ ಬೆನ್ನಲ್ಲೇ ನಾಯಕ ಮಯಾಂಕ್ ಅಗರ್‌ವಾಲ್(06), ರಿಯಾನ್ ಪರಾಗ್(06), ತಿಲಕ್ ವರ್ಮಾ(02) ಹಾಗೂ ಕುಮಾರ್ ಕುಶಾಗ್ರ(00) ಕೂಡಾ ಪೆವಿಲಿಯನ್ ಮರಳಿದರು. ತಂಡ ಕೇವಲ 36 ರನ್ ಗಳಿಸುವಷ್ಟರಲ್ಲೇ ಪ್ರಮುಖ ಐವರು ಬ್ಯಾಟರ್‌ಗಳನ್ನು ಕಳೆದುಕೊಂಡಿತು.ಈ ಹಂತದಲ್ಲಿ ಶಾಶ್ವತ್ ಹಾಗೂ ಶಮ್ಸ್ ಮುಲಾನಿ(44) ತಂಡವನ್ನು ಆಧರಿಸಿದರು.
ಈ ಜೋಡಿ 6ನೇ ವಿಕೆಟ್‌ಗೆ 171 ಎಸೆತಗಳಲ್ಲಿ 87 ರನ್ ಜೊತೆಯಾಟವಾಡಿತು. 7ನೇ ವಿಕೆಟ್‌ಗೆ ತನುಶ್ ಕೋಟ್ಯನ್(10) ಜೊತೆಗೂಡಿ 31 ರನ್, ಮುರಿಯದ 8ನೇ ವಿಕೆಟ್‌ಗೆ ಆವೇಶ್ ಖಾನ್(ಔಟಾಗದೆ 16) ಜೊತೆಗೂಡಿ 70 ರನ್ ಸೇರಿಸಿರುವ ರಾವತ್, 2ನೇ ದಿನ ತಂಡಕ್ಕೆ ದೊಡ್ಡ ಮೊತ್ತದ ಭರವಸೆ ನೀಡಿದ್ದಾರೆ. ಸದ್ಯ ಅವರು 235 ಎಸೆತಗಳಲ್ಲಿ 122 ರನ್ ಸಿಡಿಸಿದ್ದಾರೆ.ಸ್ಕೋರ್: ಭಾರತ ‘ಎ’ 224/7 (ಮೊದಲ ದಿನದಂತ್ಯಕ್ಕೆ)(ಶಾಶ್ವತ್ 122*, ಶಮ್ಸ್ 44, ಅನ್ಶುಲ್ ಕಂಬೋಜ್ 3-40)