ಸಾರಾಂಶ
ಭಾರತದ ರೈಜಾ ಧಿಲ್ಲೊನ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದು, ಈ ಮೂಲಕ ದೇಶದ 19 ಶೂಟರ್‌ಗಳಿಗೆ ಪ್ಯಾರಿಸ್ ಟಿಕೆಟ್ ಸಿಕ್ಕಂತಾಗಿದೆ.
ಕುವೈತ್: ಇಲ್ಲಿ ನಡೆಯುತ್ತಿರುವ ಏಷ್ಯಾ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಭಾರತೀಯರ ಪಾರಮ್ಯ ಮುಂದುವರಿದಿದೆ. ಭಾರತ್ ರೈಜಾ ಧಿಲ್ಲೊನ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದು, ಈ ಮೂಲಕ ದೇಶದ 19 ಶೂಟರ್‌ಗಳಿಗೆ ಪ್ಯಾರಿಸ್ ಟಿಕೆಟ್ ಸಿಕ್ಕಂತಾಗಿದೆ.
ಶನಿವಾರ ನಡೆದ ಮಹಿಳೆಯರ ಶಾಟ್‌ಗನ್ ಸ್ಕೀಟ್ ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ 19 ವರ್ಷದ ಧಿಲ್ಲೋನ್, 3/4 ಗುರಿ ತಪ್ಪಿದ ಹೊಡೆತಗಳಿಂದ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಇದೇ ವಿಭಾಗದಲ್ಲಿ ಭಾರತದ ಮಹೇಶ್ವರಿ ಚೌಹಾನ್ ಕಂಚಿನ ಪದಕ ಪಡೆದರೆ, ಗೆಣೆಮತ್ ಸೆಖೋನ್ 4ನೇ ಸ್ಥಾನಕ್ಕೆ ತೃಪ್ತರಾದರು. ಚಿನ್ನ ಗೆದ್ದಿರುವ ಚೀನಾದ ಜಿನ್‌ಮಿ ಗೂ ಕೂಡಾ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಪುರುಷರ ಸ್ಕೀಟ್ ವಿಭಾಗದಲ್ಲಿ ಅನಂತ್ ಜೀತ್ ಸಿಂಗ್ ಬೆಳ್ಳಿ ಪದಕದೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದು, ಕೇವಲ ಒಂದು ಅಂಕದ ಅಂತರದಲ್ಲಿ ಚಿನ್ನ ಕೈತಪ್ಪಿತು. 57 ಅಂಕ ಗಳಿಸಿದ ಚೀನಾದ ಮಿಂಗ್ ಯ್ಯೂನ್ ಲೀ 57 ಅಂಕ ಗಳಿಸಿ ಚಿನ್ನದ ಪದಕ ಗಳಿಸಿದರು.