ಸಾರಾಂಶ
ಕೋಲ್ಕತಾ: ಹರಾಜಿನಲ್ಲಿ ಬಂಪರ್ ಮೊತ್ತಕ್ಕೆ ಹರಾಜಾಗಿ ಎಲ್ಲರ ಹುಬ್ಬೇರಿಸಿದ್ದ ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ಈ ಬಾರಿ ಐಪಿಎಲ್ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ಶನಿವಾರ ಕೋಲ್ಕತಾ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದ್ದು, ಆಸೀಸ್ ತಾರೆಗಳ ಜೊತೆ ಕೋಲ್ಕತಾ ನಾಯಕ ಶ್ರೇಯಸ್ ಅಯ್ಯರ್ ಮೇಲೆ ಭಾರಿ ನಿರೀಕ್ಷೆ ಇದೆ.
ಶ್ರೇಯಸ್ ಗಾಯದಿಂದಾಗಿ ಕಳೆದ ವರ್ಷ ಐಪಿಎಲ್ನಲ್ಲಿ ಆಡಿರಲಿಲ್ಲ. ಟಿ20 ವಿಶ್ವಕಪ್ ಮುಂದಿರುವ ಕಾರಣ ಅವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ.
ಕೋಲ್ಕತಾದಲ್ಲಿ ತಾರಾ ಆಟಗಾರರ ದಂಡೇ ಇದ್ದು, ಸ್ಟಾರ್ಕ್, ಆ್ಯಂಡ್ರೆ ರಸೆಲ್, ನರೈನ್, ಶಕೀಬ್ ಜೊತೆ ದೇಸಿ ಪ್ರತಿಭೆಗಳಾದ ಮನೀಶ್, ರಿಂಕು ಸಿಂಗ್, ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ ಮೇಲೆ ನಿರೀಕ್ಷೆ ಇದೆ.
ಆಸೀಸ್ ನಾಯಕ ಕಮಿನ್ಸ್ ಐಪಿಎಲ್ನಲ್ಲಿ ಮೊದಲ ಬಾರಿ ನಾಯಕತ್ವ ವಹಿಸಲಿದ್ದು, ಹೈದರಾಬಾದ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಕಾತರದಲ್ಲಿದ್ದಾರೆ.
ಮಾರ್ಕ್ರಮ್, ಟ್ರ್ಯಾವಿಸ್ ಹೆಡ್, ಮಾರ್ಕೊ ಯಾನ್ಸನ್, ಗ್ಲೆನ್ ಫಿಲಿಪ್ಸ್, ಕ್ಲಾಸೆನ್ ಸೇರಿದಂತೆ ವಿದೇಶಿ ತಾರೆಗಳು ಹಲವರಿದ್ದು, ಭುವನೇಶ್ವರ್, ಮಯಾಂಕ್ ಅಗರ್ವಾಲ್, ಅಭಿಶೇಕ್ ಶರ್ಮಾ, ನಟರಾಜನ್, ಉಮ್ರಾನ್ ಕೂಡಾ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದ್ದಾರೆ.
ಒಟ್ಟು ಮುಖಾಮುಖಿ: 25
ಕೋಲ್ಕತಾ: 16 ಹೈದ್ರಾಬಾದ್: 09
ಸಂಭವನೀಯ ಆಟಗಾರರ ಪಟ್ಟಿ
ಕೋಲ್ಕತಾ: ಗುರ್ಬಾಜ್, ವೆಂಕಟೇಶ್, ನಿತೀಶ್, ಶ್ರೇಯಸ್(ನಾಯಕ), ರಿಂಕು ಸಿಂಗ್, ರಸೆಲ್, ನರೈನ್, ಸ್ಟಾರ್ಕ್, ಚೇತನ್, ಚಕ್ರವರ್ತಿ, ವೈಭವ್.
ಹೈದ್ರಾಬಾದ್: ಹೆಡ್, ಅಭಿಷೇಕ್, ತ್ರಿಪಾಠಿ, ಮಾರ್ಕ್‌ರಮ್, ಕ್ಲಾಸೆನ್, ಕಮಿನ್ಸ್(ನಾಯಕ), ವಾಷಿಂಗ್ಟನ್, ಭುವನೇಶ್ವರ್, ಶಾಬಾಜ್, ನಟರಾಜನ್, ಉಮ್ರಾನ್.
ಪಂದ್ಯ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಸಿನಿಮಾ