ಪ್ಯಾರಿಸ್‌ನಲ್ಲಿ ಕ್ರೀಡಾ ಜ್ಯೋತಿ ಸ್ವಾಗತಿಸಿದ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ

| Published : Aug 29 2024, 12:48 AM IST / Updated: Aug 29 2024, 04:10 AM IST

ಪ್ಯಾರಿಸ್‌ನಲ್ಲಿ ಕ್ರೀಡಾ ಜ್ಯೋತಿ ಸ್ವಾಗತಿಸಿದ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನ ಕ್ರೀಡಾ ಜ್ಯೋತಿ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ಯಾರಿಸ್‌: ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನ ಕ್ರೀಡಾ ಜ್ಯೋತಿ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬುಧವಾರ 17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಪ್ಯಾರಿಸ್‌ ನಗರದ ಐತಿಹಾಸಿಕ ಸ್ಕ್ವೇರ್‌ ಪ್ಲೇಸ್‌ ಡೆ ಲಾ ಕಾನ್‌ಕೊರ್ಡ್‌ ಎಂಬಲ್ಲಿ ನಡೆಯಿತು.

 ಸಾವಿರಾರು ಕಲಾವಿದರು ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಿದರು. ಸಮಾರಂಭಕ್ಕೂ ಮುನ್ನ ಪ್ಲೇಸ್ ಡಿ ಲಾ ಕಾನ್‌ಕಾರ್ಡ್ ಚೌಕದಲ್ಲಿ ಆಯೋಜಿಸಿದ ಪ್ಯಾರಾಲಿಂಪಿಕ್ಸ್ 2024 ಕ್ರೀಡಾ ಜ್ಯೋತಿ ಸಮಾರಂಭದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಅವರು ಭಾಗಿಯಾದರು. 

ಕಾರ್ಯಕ್ರಮದಲ್ಲಿ ಇತರ ದೇಶಗಳ ಅಥ್ಲೀಟ್‌ಗಳ ಜೊತೆ ಕಾಣಿಸಿಕೊಂಡ ಅವರು, ಧ್ಜಜ ಬೀಸಿ ಸಂಭ್ರಮಿಸಿದರು. ಪ್ಯಾರಾಲಿಂಪಿಕ್ಸ್‌ನ ಉಗಮ ಸ್ಥಾನ ಎಂದೇ ಕರೆಯಲ್ಪಡುವ ಇಂಗ್ಲೆಂಡ್‌ನ ಲಂಡನ್‌ ಸಮೀಪದ ಸ್ಟೋಕ್‌ ಮ್ಯಾಂಡೆವಿಲ್ಲೆ ಎಂಬ ಹಳ್ಳಿಯಲ್ಲಿ ಶನಿವಾರ ಕ್ರೀಡಾ ಜ್ಯೋತಿಯನ್ನು ಹೊತ್ತಿಸಲಾಯಿತು. ಜ್ಯೋತಿಯನ್ನು ಇಂಗ್ಲಿಷ್ ಕಡಲ್ಗಾಲುವೆ ಮೂಲಕ ಪ್ಯಾರಿಸ್‌ಗೆ ತರಲಾಗುತ್ತಿದ್ದು, ಬುಧವಾರ ಉದ್ಘಾಟನಾ ಸಮಾರಂಭದ ವೇಳೆ ಜ್ಯೋತಿ ಪುಂಜವನ್ನು ಬೆಳಗಿಸಲಾಯಿತು.

11 ದಿನವೂ ಪದಕ ಸ್ಪರ್ಧೆ: ಪದಕ ಸ್ಪರ್ಧೆಗಳು ಆ.29 ಅಂದರೆ ಗುರುವಾರದಿಂದ ಆರಂಭಗೊಳ್ಳಲಿದ್ದು, ಒಲಿಂಪಿಕ್ಸ್‌ನಂತೆಯೇ ಪ್ರತಿ ದಿನವೂ ಪದಕ ಸ್ಪರ್ಧೆಗಳು ಇರಲಿವೆ. 11 ದಿನಗಳಲ್ಲಿ 22 ಕ್ರೀಡೆಗಳ ಒಟ್ಟು 549 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ.