ಮ್ಯಾಡ್ರಿಡ್‌ ಮಾಸ್ಟರ್ಸ್‌: ಸಿಂಧು ಕ್ವಾರ್ಟರ್‌ ಫೈನಲ್‌ ಪ್ರವೇಶ

| Published : Mar 29 2024, 12:47 AM IST

ಸಾರಾಂಶ

ಪ್ರಿ ಕ್ವಾರ್ಟರ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಅವರು ವಿಶ್ವ ನಂ.63, ಚೈನೀಸ್‌ ತೈಪೆಯ ಹುವಾಂಗ್‌ ಯು ಸುನ್‌ ವಿರುದ್ಧ ನೇರ ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು.

ಮ್ಯಾಡ್ರಿಡ್‌: 2 ಬಾರಿ ಒಲಿಂಪಿಕ್‌ ಪದಕ ವಿಜೇತೆ, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಮ್ಯಾಡ್ರಿಡ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಅವರು ವಿಶ್ವ ನಂ.63, ಚೈನೀಸ್‌ ತೈಪೆಯ ಹುವಾಂಗ್‌ ಯು ಸುನ್‌ ವಿರುದ್ಧ 21-14, 21-12 ನೇರ ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಅರ್ಜುನ್‌-ಧ್ರುವ್‌ ಕಪಿಲಾ, ಸ್ಕಾಟ್ಲೆಂಡ್‌ನ ಕ್ರಿಸ್ಟೋಫರ್‌ ಗ್ರಿಮ್ಲಿ-ಮ್ಯಾಥ್ಯೂ ಗ್ರಿಮ್ಲಿ ವಿರುದ್ಧ ಗೆದ್ದು ಅಂತಿಮ 8ರ ಘಟ್ಟ ಪ್ರವೇಶಿಸಿದರು.ಎಲೈಟ್‌ ಪ್ಯಾನೆಲ್‌ನಲ್ಲೇ ಉಳಿದ ಅಂಪೈರ್‌ ನಿತಿನ್‌

ದುಬೈ: ಭಾರತದ ಅಂಪೈರ್‌ ನಿತಿನ್‌ ಮೆನನ್‌ ಐಸಿಸಿ ಎಲೈಟ್‌ ಪ್ಯಾನೆಲ್‌ನಲ್ಲಿ ಸತತ 5ನೇ ವರ್ಷವೂ ಮುಂದುವರಿಯಲಿದ್ದಾರೆ. ಇಂದೋರ್‌ ಮೂಲದ ನಿತಿನ್‌, 2020ರಲ್ಲಿ ಎಲೈಟ್‌ ಪ್ಯಾನೆಲ್‌ಗೆ ಸೇರ್ಪಡೆಗೊಂಡಿದ್ದರು. 12 ಉತ್ಕೃಷ್ಟ ಮಟ್ಟದ ಅಂಪೈರ್‌ಗಳಿರುವ ಈ ಪಟ್ಟಿಯಲ್ಲಿ ನಿತಿನ್‌ ಏಕೈಕ ಭಾರತೀಯ. ಈ ಮೊದಲು ಭಾರತದ ಎಸ್‌.ವೆಂಕಟರಾಘವನ್‌ ಹಾಗೂ ಎಸ್‌.ರವಿ ಅವರಿಗೆ ಈ ಗೌರವ ದೊರೆತಿತ್ತು.