ಮಂಗಳೂರಿನಲ್ಲಿ 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ : ಕರ್ನಾಟಕಕ್ಕೆ ಮತ್ತೆ 3 ಚಿನ್ನ ಸೇರಿ 8 ಪದಕ

| Published : Sep 12 2024, 01:52 AM IST / Updated: Sep 12 2024, 04:33 AM IST

ಮಂಗಳೂರಿನಲ್ಲಿ 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ : ಕರ್ನಾಟಕಕ್ಕೆ ಮತ್ತೆ 3 ಚಿನ್ನ ಸೇರಿ 8 ಪದಕ
Share this Article
  • FB
  • TW
  • Linkdin
  • Email

ಸಾರಾಂಶ

2 ದಿನದಲ್ಲೇ 17 ಮೆಡಲ್ ಗೆದ್ದ ಕರ್ನಾಟಕದ ಈಜುಪಟುಗಳು. 100 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀಹರಿ ನಟರಾಜ್‌ 50.59 ಸೆಕೆಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.

 ಮಂಗಳೂರು :  77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮತ್ತೆ 8 ಪದಕ ಬಾಚಿಕೊಂಡಿದೆ. ಕೂಟದ 2ನೇ ದಿನವಾದ ಬುಧವಾರವೂ ರಾಜ್ಯದ ಈಜುಪಟುಗಳು ಪ್ರಾಬಲ್ಯ ಸಾಧಿಸಿ, 3 ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು. 

ಒಟ್ಟಾರೆ 2 ದಿನಗಳಲ್ಲಿ ಕರ್ನಾಟಕಕ್ಕೆ 9 ಚಿನ್ನ ಸೇರಿ 17 ಪದಕ ಲಭಿಸಿವೆ.ಬುಧವಾರ ಪುರುಷರ 800 ಮೀ. ಫ್ರೀಸ್ಟೈಲ್‌ನಲ್ಲಿ ಅನೀಶ್‌ ಗೌಡ(8 ನಿಮಿಷ 20.01 ಸೆಕೆಂಡ್‌) ಚಿನ್ನ, ದರ್ಶನ್‌(8:27.69 ನಿ.) ಬೆಳ್ಳಿ ಜಯಿಸಿದರು. 200 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ಶಿವ ಶ್ರೀಧರ್‌ 2 ನಿಮಿಷ 08.31 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ, 100 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀಹರಿ ನಟರಾಜ್‌ 50.59 ಸೆಕೆಡ್‌ಗಳಲ್ಲಿ ಗುರಿ ತಲುಪಿ ಚಿನ್ನ, 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿದಿತ್‌ ಶಂಕರ್‌ 28.62 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಜಯಿಸಿದರು.

ಮಹಿಳೆಯರ 1500 ಮೀ. ಫ್ರೀಸ್ಟೈಲ್‌ನಲ್ಲಿ ರಾಜ್ಯದ ಶಿರಿನ್‌ ಬೆಳ್ಳಿ, 200 ಮೀಎ. ಮೆಡ್ಲೆ ಸ್ಪರ್ಧೆಯಲ್ಲಿ ಹಶಿಕಾ ರಾಮಚಂದ್ರ ಬೆಳ್ಳಿ, ಮಾನವಿ ವರ್ಮಾ ಕಂಚು ಗೆದ್ದರು. ಕೂಟ ಇನ್ನೂ 2 ದಿನಗಳ ಕಾಲ ನಡೆಯಲಿದೆ.