ಎಸ್ಸೆಸ್ಸೆಫ್‌ ಮೆಜೆಸ್ಟಿಕ್ ಡಿವಿಷನ್ ಸಾಹಿತ್ಯೋತ್ಸವ : ನೂರಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು- ಅಝಾದ್ ನಗರ ಚಾಂಪಿಯನ್‌

| Published : Nov 08 2024, 12:33 AM IST / Updated: Nov 08 2024, 04:20 AM IST

ಎಸ್ಸೆಸ್ಸೆಫ್‌ ಮೆಜೆಸ್ಟಿಕ್ ಡಿವಿಷನ್ ಸಾಹಿತ್ಯೋತ್ಸವ : ನೂರಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು- ಅಝಾದ್ ನಗರ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ 8 ಯೂನಿಟ್‌ಗಳಿಂದ ನೂರಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು ಪಾಲ್ಗೊಂಡರು. ನಾಲ್ಕು ವೇದಿಕೆಗಳಲ್ಲಿ ನೂರರಷ್ಟು ಸ್ಪರ್ಧೆಗಳು ನಡೆಯಿತು. ಭಾಗವಹಿಸಿ ವಿಜೇತರಾದ ಸ್ಪರ್ಧಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ಬೆಂಗಳೂರು: ಯೂನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನಡೆಯುವ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್‌ ಫೆಡರೇಷನ್(ಎಸ್ಸೆಸ್ಸೆಫ್) ಇದರ ಸಾಹಿತ್ಯೋತ್ಸವದ ಬೆಂಗಳೂರು ಜಿಲ್ಲೆಯ ಮೆಜೆಸ್ಟಿಕ್ ಡಿವಿಷನ್ ಮಟ್ಟದ ಸ್ಪರ್ಧೆಗಳು ಭಾನುವಾರ ನಗರದ ಗಂಗೊಂಡನಹಳ್ಳಿ ಮೀರಾಜುಲ್ ಮುಮಿನೀನ್ ಮದರಸ ಹಾಲ್‌ನಲ್ಲಿ ನಡೆಯಿತು. 

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಯ್ಯದ್ ಕುಂಞಕೋಯ ತಂಙಳ್‌ ಪ್ರಾರ್ಥನೆ ನಡೆಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಸ್ಥಳೀಯ ಮಸೀದಿ ಖತೀಬ್ ಮೌಲಾನ ಅರ್ಶದ್ ರಝ ಹಜ್ರತ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ 8 ಯೂನಿಟ್‌ಗಳಿಂದ ನೂರಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು ಪಾಲ್ಗೊಂಡರು. ನಾಲ್ಕು ವೇದಿಕೆಗಳಲ್ಲಿ ನೂರರಷ್ಟು ಸ್ಪರ್ಧೆಗಳು ನಡೆಯಿತು.

 ಭಾಗವಹಿಸಿ ವಿಜೇತರಾದ ಸ್ಪರ್ಧಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.ಸಂಜೆ ಸಾಹಿತ್ಯೋತ್ಸವ ಸಮಿತಿ ಮುಖ್ಯಸ್ಥ ಇರ್ಷಾದ್ ಖಾದ್ರಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ಜರುಗಿತು, ಕಾರ್ಯಕ್ರಮವನ್ನು ಜಿಲ್ಲಾ ಸಾಹಿತ್ಯೋತ್ಸವದ ಮುಖ್ಯಸ್ಥ ಫಾರೂಕ್ ಅಮಾನಿ ಉದ್ಘಾಟಿಸಿದರು. 

ಎಸ್ಸೆಸ್ಸೆಫ್‌ ಜಿಲ್ಲಾ ಅಧ್ಯಕ್ಷ ಲತೀಫ್ ನಈಮಿ, ಕಾರ್ಯದರ್ಶಿ ಸಬೀಬ್, ಜಿಲ್ಲಾ ಸಾಹಿತ್ಯೋತ್ಸವ ಕನ್ವಿನರ್ ಅಲ್ತಾಫ್‌, ಮೌಲಾನ ಅರ್ಶದ್ ರಝ ಹಜ್ರತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿವಿಷನ್ ಮಟ್ಟದಲ್ಲಿ ಅಝಾದ್ ನಗರ ಚಾಂಪಿಯನ್ ಆದರೆ, ಕಂಬಿಪುರ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಗಣ್ಯರು ವಿಜೇತ ಯೂನಿಟ್‌ಗಳಿಗೆ ಚಾಂಪಿಯನ್ ಟ್ರೋಫಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಐಟಿ ಕಾರ್ಯದರ್ಶಿ ನೌಫಲ್ ಅಡೋರ ಮತ್ತು ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಶಂಸುದ್ದೀನ್ ಗಾಂಜಾಲ್ ಉಪಸ್ಥಿತರಿದ್ದರು. ಮೆಜೆಸ್ಟಿಕ್ ಡಿವಿಷನ್ ಸಾಹಿತ್ಯೋತ್ಸವ ಕನ್ವಿನರ್ ಜೈನುದ್ದೀನ್ ಅನ್ವರಿ ಸ್ವಾಗತಿಸಿ, ಸಲ್ಮಾನ್ ನಿಝಮಿ ಕಾರ್ಯಕ್ರಮ ನಿರೂಪಿಸಿದರು.