ಹಾರ್ದಿಕ್‌ ಪಾಂಡ್ಯಗೆ ಹ್ಯಾಟ್ರಿಕ್‌ ಸೋಲು ತಪ್ಪಿಸುವ ಒತ್ತಡ. ನಾಯಕತ್ವದ ವಿಚಾರದಲ್ಲಿ ತಂಡದಲ್ಲಿ ಬಣಗಳು ಸೃಷ್ಟಿಯಾಗಿರುವ ಬಗ್ಗೆ ವರದಿ. ಹೀಗಾಗಿ ಒಗ್ಗಟ್ಟಾಗಿ ಪಂದ್ಯ ಗೆದ್ದು ತೋರಿಸಬೇಕಾದ ಅನಿವಾರ್ಯತೆ.

ಮುಂಬೈ: ತಂಡದ ಸೋಲಿಗಿಂತಲೂ ಹೆಚ್ಚಾಗಿ ತಮ್ಮ ನಾಯಕತ್ವದ ವಿಚಾರದಲ್ಲಿ ಭಾರಿ ಟೀಕೆಗೊಳಗಾಗುತ್ತಿರುವ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಲಿದೆ.

 ಮುಂಬೈ ತಂಡ ಸೋಮವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಾಡಲಿದ್ದು, ಹ್ಯಾಟ್ರಿಕ್‌ ಸೋಲು ತಪ್ಪಿಸಿ ಮೊದಲ ಗೆಲುವು ದಾಖಲಿಸಲು ಎದುರು ನೋಡುತ್ತಿದೆ. ಅತ್ತ ರಾಜಸ್ಥಾನ ಸತತ 3ನೇ ಗೆಲುವಿನ ಕಾತರದಲ್ಲಿದೆ. 

ಆರಂಭಿಕ ಪಂದ್ಯದಲ್ಲಿ ಗುಜರಾತ್, ಬಳಿಕ ದಾಖಲೆಯ ರನ್‌ ಮಳೆ ಹರಿದಿದ್ದ ಹೈದರಾಬಾದ್‌ ವಿರುದ್ಧ ಪಂದ್ಯಗಳಲ್ಲಿ ಮುಂಬೈ ಸೋತಿದೆ. ತಂಡ ಎಲ್ಲಾ ವಿಭಾಗದಲ್ಲೂ ವಿಫಲವಾಗಿದ್ದು, ನಾಯಕತ್ವದ ವಿಚಾರದಲ್ಲೂ ತಂಡದಲ್ಲಿ ಬಣಗಳು ಸೃಷ್ಟಿಯಾಗಿರುವ ಬಗ್ಗೆ ವರದಿಯಾಗುತ್ತಿದೆ. ಹೀಗಾಗಿ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಂತು, ಒಗಟ್ಟಾಗಿ ಪಂದ್ಯ ಗೆಲ್ಲಬೇಕಾದ ಒತ್ತಡ ಮುಂಬೈಗಿದೆ.ಅತ್ತ ರಾಜಸ್ಥಾನ ತಂಡ ಲಖನೌ ಹಾಗೂ ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದ್ದು, ಜಯದ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಆದರೆ ಮುಂಬೈನ ಭದ್ರಕೋಟೆ ವಾಂಖೇಡೆಯಲ್ಲಿ ಹಾರ್ದಿಕ್‌ ಬಳಗವನ್ನು ಕಟ್ಟಿಹಾಕಲು ರಾಜಸ್ಥಾನಕ್ಕೆ ಸಾಧ್ಯವಾಗಲಿದೆಯೇ ಎಂಬ ಕುತೂಹಲವಿದೆ.

ಒಟ್ಟು ಮುಖಾಮುಖಿ: 27ಮುಂಬೈ: 15ರಾಜಸ್ಥಾನ: 12

ಸಂಭವನೀಯ ಆಟಗಾರರ ಪಟ್ಟಿಮುಂಬೈ: ಕಿಶಾನ್‌, ರೋಹಿತ್‌, ತಿಲಕ್‌, ನಮನ್‌, ಹಾರ್ದಿಕ್‌(ನಾಯಕ), ಟಿಮ್‌ ಡೇವಿಡ್‌, ಕೋಟ್ಜೀ, ಮುಲಾನಿ, ಚಾವ್ಲಾ, ಬೂಮ್ರಾ, ಮಫಾಕ.ರಾಜಸ್ಥಾನ: ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌(ನಾಯಕ), ರಿಯಾನ್‌, ಹೆಟ್ಮೇಯರ್‌, ಜುರೆಲ್‌, ಅಶ್ವಿನ್‌, ಬೌಲ್ಟ್‌, ಚಹಲ್‌, ಸಂದೀಪ್‌, ಆವೇಶ್‌.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.