ಸನ್‌ರೈಸರ್ಸ್‌ ಅಬ್ಬರಕ್ಕೆ ಬೀಳುತ್ತಾ ಬ್ರೇಕ್

| Published : Mar 31 2024, 02:00 AM IST / Updated: Mar 31 2024, 04:53 AM IST

ಸಾರಾಂಶ

ಕ್ಲಾಸೆನ್‌, ಅಭಿಷೇಕ್‌ ಶರ್ಮಾ, ಮಾರ್ಕ್‌ರಮ್‌, ಟ್ರ್ಯಾವಿಸ್‌ ಹೆಡ್‌ ಹಿಂದಿನ ಪಂದ್ಯದಂತೆ ಮತ್ತೆ ಅಬ್ಬರಿಸಿದರೆ ಗುಜರಾತ್‌ಗೆ ಉಳಿಗಾಲವಿಲ್ಲ. ತಂಡ ಕೋಲ್ಕತಾ ವಿರುದ್ಧ 204 ರನ್‌, ಮುಂಬೈ ವಿರುದ್ಧ ದಾಖಲೆಯ 277 ರನ್‌ ಚಚ್ಚಿತ್ತು.

ಅಹಮದಾಬಾದ್‌: ಆಡಿರುವ 2 ಪಂದ್ಯಗಳಲ್ಲೂ ಅಬ್ಬರದ ಪ್ರದರ್ಶನ ನೀಡಿ ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿರುವ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತೊಮ್ಮೆ ಸ್ಫೋಟಕ ಆಟವಾಡಲು ಕಾಯುತ್ತಿದ್ದು, ಭಾನುವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಾಡಲಿದೆ.

 ಈ ಬಾರಿ ಟೂರ್ನಿಯಲ್ಲಿ ಇತ್ತಂಡಗಳೂ ಆಡಿರುವ ತಲಾ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿವೆ.ಸನ್‌ರೈಸರ್ಸ್‌ ಈ ಬಾರಿ ಆಟದ ಶೈಲಿನಲ್ಲೇ ಬದಲಾಯಿಸಿದ್ದು, ಕೋಲ್ಕತಾ ವಿರುದ್ಧ 204 ರನ್‌ ಸಿಡಿಸಿದ್ದರೆ, ಮುಂಬೈ ವಿರುದ್ಧ ದಾಖಲೆಯ 277 ರನ್‌ ಚಚ್ಚಿತ್ತು. ಕ್ಲಾಸೆನ್‌, ಅಭಿಷೇಕ್‌ ಶರ್ಮಾ, ಮಾರ್ಕ್‌ರಮ್‌, ಟ್ರ್ಯಾವಿಸ್‌ ಹೆಡ್‌ ಹಿಂದಿನ ಪಂದ್ಯದಂತೆ ಮತ್ತೆ ಅಬ್ಬರಿಸಿದರೆ ಗುಜರಾತ್‌ಗೆ ಉಳಿಗಾಲವಿಲ್ಲ. ಆದರೆ ಇವರನ್ನು ತವರು ಅಂಗಳದಲ್ಲಿ ಕಟ್ಟಿಹಾಕಲು ಗುಜರಾತ್‌ ಬೌಲರ್‌ಗಳು ಯೋಜನೆ ರೂಪಿಸಿದ್ದು, ಯಶಸ್ವಿಯಾಗುತ್ತಾರಾ ಕಾದು ನೋಡಬೇಕಿದೆ. 

ಮತ್ತೊಂದೆಡೆ ಗಿಲ್‌ ಪಡೆ ಮೊದಲೆರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಗಿಲ್‌ ಜೊತೆ ಸುದರ್ಶನ್‌, ಡೇವಿಡ್‌ ಮಿಲ್ಲರ್‌ ಅಬ್ಬರಿಸಬೇಕಿದ್ದು, ರಶೀದ್‌ ಖಾನ್, ತೆವಾಟಿಯ ಆಲ್ರೌಂಡ್‌ ಆಟ ನಿರ್ಣಾಯಕವೆನಿಸಿದೆ.

ಒಟ್ಟು ಮುಖಾಮುಖಿ: 03

ಗುಜರಾತ್‌: 02

ಹೈದ್ರಾಬಾದ್‌: 01

ಸಂಭವನೀಯ ಆಟಗಾರರ ಪಟ್ಟಿ

ಗುಜರಾತ್‌: ಸಾಹ, ಶುಭ್‌ಮನ್‌ ಗಿಲ್‌(ನಾಯಕ), ಸುದರ್ಶನ್‌, ಮಿಲ್ಲರ್‌, ಅಜ್ಮತುಲ್ಲಾ, ತೆವಾಟಿಯಾ, ರಶೀದ್‌, ಉಮೇಶ್‌, ಸ್ಪೆನ್ಸರ್‌, ಕಿಶೋರ್‌, ಮೋಹಿತ್‌.

ಹೈದ್ರಾಬಾದ್‌: ಮಯಾಂಕ್‌, ಹೆಡ್‌, ಅಭಿಷೇಕ್‌, ಮಾರ್ಕ್‌ರಮ್‌, ಕ್ಲಾಸೆನ್‌, ಸಮದ್‌, ಶಾಬಾಜ್, ಕಮಿನ್ಸ್‌(ನಾಯಕ), ಭುವನೇಶ್ವರ್‌, ಮಾರ್ಖಂಡೆ, ಉನಾದ್ಕಟ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.