ಫೆ.25ಕ್ಕೆ ಬೆಂಗಳೂರಿನಲ್ಲಿ ಸೂಪರ್‌ಕ್ರಾಸ್‌ ರೇಸಿಂಗ್‌

| Published : Feb 16 2024, 01:50 AM IST / Updated: Feb 16 2024, 01:02 PM IST

ಸಾರಾಂಶ

ಭಾರತದ ಮೊದಲ ಫ್ರಾಂಚೈಸಿ ಆಧಾರಿತ ಸೂಪರ್‌ಕ್ರಾಸ್‌ ಲೀಗ್‌ ಖ್ಯಾತಿಯ ಇಂಡಿಯನ್ ಸೂಪರ್‌ ಕ್ರಾಸ್ ರೇಸಿಂಗ್ ಲೀಗ್‌ನ ಮೊದಲ ಸೀಸನ್ ಫಿನಾಲೆ ಫೆ.25ರಂದು ಬೆಂಗಳೂರಿನಲ್ಲಿ ನಡೆಯುಲಿದೆ.

ಬೆಂಗಳೂರು: ಭಾರತದ ಮೊದಲ ಫ್ರಾಂಚೈಸಿ ಆಧಾರಿತ ಸೂಪರ್‌ಕ್ರಾಸ್‌ ಲೀಗ್‌ ಖ್ಯಾತಿಯ ಇಂಡಿಯನ್ ಸೂಪರ್‌ ಕ್ರಾಸ್ ರೇಸಿಂಗ್ ಲೀಗ್‌ನ ಮೊದಲ ಸೀಸನ್ ಫಿನಾಲೆ ಫೆ.25ರಂದು ಬೆಂಗಳೂರಿನಲ್ಲಿ ನಡೆಯುಲಿದೆ. 

ಮಾಲ್ ಆಫ್ ಏಷ್ಯಾದ ಮುಂಭಾಗದ ಬ್ಯಾಟರಾಯನಪುರದ ಎಪಿಎಂಸಿ ಮೈದಾನದಲ್ಲಿ ಫಿನಾಲೆ ಸ್ಪರ್ಧೆ ಆಯೋಜನೆಗೊಂಡಿದೆ. 

ಈ ಮೊದಲು ರೇಸ್‌ ನವದೆಹಲಿಯಲ್ಲಿ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಸ್ಥಳಾಂತರಗೊಂಡಿದೆ. ಸೂಪರ್‌ಕ್ರಾಸ್ ಇಂಡಿಯಾ ಪ್ರೈ ಲಿಮಿಟೆಡ್ ನ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ವೀರ್ ಪಟೇಲ್ ಮಾತನಾಡಿ, ಸೀಸನ್ ಒಂದರ ಅಂತಿಮ ಸುತ್ತಿನ ಕುರಿತಾದ ನಿರೀಕ್ಷೆ ನಮ್ಮ ಗಮನದಲ್ಲಿದೆ. 

ಈ ನಿಟ್ಟಿನಲ್ಲಿ ಹೊಂದಾಣಿಕೆ ಕೊರತೆಯಿಂದ ಉಂಟಾದ ಅನನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಆದಾಗ್ಯೂ, ಎದುರಾಗಿರುವ ಸಂದರ್ಭ ಮತ್ತು ಇತರ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ಪಿನಾಲೆಯನ್ನು ಅನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ. 

ಇದು ನಮ್ಮ ಪಾಲುದಾರರ ವಿಶ್ವಾಸ ಹೆಚ್ಚಿಸುತ್ತದೆ ಮತ್ತು ಅಪಾರ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂದು ನಾವು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.

ಸಿಯೆಟ್ ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್ ಅಭಿಮಾನಿಗಳಿಗೆ ಮತ್ತು ಭಾಗವಹಿಸುವವರಿಗೆ ಅಪೂರ್ವ ಅನುಭವವನ್ನು ನೀಡಲಿದೆ. ಬೆಂಗಳೂರಿನಲ್ಲಿ ಸೂಪರ್‌ಕ್ರಾಸ್‌ನಲ್ಲಿ ಭಾಗವಹಿಸುವ ಎಲ್ಲರಿಗೂ ಶಾಶ್ವತವಾದ ನೆನಪುಗಳನ್ನು ಸೃಷ್ಟಿಸಲಿದೆ.