ಬೆಂಗಳೂರು 10K ರೇಸ್‌ಗೆ ಕ್ಷಣಗಣನೆ: ರೂಟ್‌ ಮ್ಯಾಪ್‌ ಬಿಡುಗಡೆ

| Published : Apr 24 2024, 02:17 AM IST

ಬೆಂಗಳೂರು 10K ರೇಸ್‌ಗೆ ಕ್ಷಣಗಣನೆ: ರೂಟ್‌ ಮ್ಯಾಪ್‌ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ರೇಸ್‌ನಲ್ಲಿ 28000 ಮಂದಿ ಪಾಲ್ಗೊಳ್ಳಲಿದ್ದಾರೆ. ವರ್ಚುವಲ್ ಆಗಿ ಸುಮಾರು 1500 ಮಂದಿ ರೇಸ್‌ನಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಬೆಂಗಳೂರು: ಏ.28ರಂದು ನಡೆಯಲಿರುವ 16ನೇ ಆವೃತ್ತಿಯ ವಿಶ್ವ 10ಕೆ ಬೆಂಗಳೂರು ರೇಸ್‌ನ ರೂಟ್‌ ಮ್ಯಾಪ್‌ ಬಿಡುಗಡೆಗೊಳಿಸಲಾಗಿದೆ. ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಯೋಜಕರು, ರೇಸ್‌ ಸಾಗಿ ಬರುವ ಮಾರ್ಗ, ಪಾರ್ಕಿಂಗ್‌ ವ್ಯವಸ್ಥೆ, ಬದಲಿ ಸಂಚಾರ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಫೀಲ್ಡ್‌ ಮಾರ್ಷಲ್‌ ಮಾಣೆಕ್‌ಶಾ ಪರೇಡ್‌ ಮೈದಾನದ ಹೊರಗಿನ ಕಬ್ಬನ್‌ ರಸ್ತೆಯಲ್ಲಿ ರೇಸ್‌ ಆರಂಭಗೊಳ್ಳಲಿದ್ದು, ಆರ್ಮಿ ಪಬ್ಲಿಕ್‌ ಸ್ಕೂಲ್‌ ಬಳಿ ಕೊನೆಗೊಳ್ಳಲಿದೆ.ರೇಸ್‌ನಲ್ಲಿ 28000 ಮಂದಿ ಪಾಲ್ಗೊಳ್ಳಲಿದ್ದಾರೆ. ವರ್ಚುವಲ್ ಆಗಿ ಸುಮಾರು 1500 ಮಂದಿ ರೇಸ್‌ನಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಬಸ್‌ ಮಿಸ್‌ ಮಾಡಿಕೊಂಡ ಟಾಪ್ಲಿಗೆ ‘ಸುದ್ದಿಗೋಷ್ಠಿ’ ಶಿಕ್ಷೆ

ಕೋಲ್ಕತಾ: ಭಾನುವಾರ ಕೋಲ್ಕತಾ ವಿರುದ್ಧ ಪಂದ್ಯದ ಬಳಿಕ ತಂಡದ ಬಸ್‌ ಮಿಸ್‌ ಮಾಡಿಕೊಂಡಿದ್ದಕ್ಕೆ ಆರ್‌ಸಿಬಿ ವೇಗಿ ರೀಸ್‌ ಟಾಪ್ಲಿಗೆ ‘ಸುದ್ದಿಗೋಷ್ಠಿ ಶಿಕ್ಷೆ’ ನೀಡಲಾಗಿದೆ. ಪಂದ್ಯದ ಬಳಿಕ ಆರ್‌ಸಿಬಿಯ ಸುದ್ದಿಗೋಷ್ಠಿ ನಿಗದಿಯಾಗಿದ್ದರೂ, ಆಟಗಾರರು ಕ್ರೀಡಾಂಗಣದಿಂದ ತೆರಳಿದ್ದರಿಂದ ಸುದ್ದಿಗೋಷ್ಠಿ ಇಲ್ಲ ಎಂದು ಪತ್ರಕರ್ತರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಆರ್‌ಸಿಬಿಯ ಆಡುವ 11ರ ಬಳಗದಲ್ಲಿ ಇರದಿದ್ದ ಟಾಪ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದಾರೆ. ಈ ಬಗ್ಗೆ ಪತ್ರಕರ್ತರು ಟಾಪ್ಲಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಟಾಪ್ಲಿ ‘ತಂಡದ ಮುಖ್ಯ ಬಸ್‌ ಈಗಾಗಲೇ ಹೋಗಿದೆ. ನಾನು ಜಿಮ್‌ನಲ್ಲಿದ್ದ ಕಾರಣ ಬಸ್‌ ಮಿಸ್‌ ಮಾಡಿಕೊಂಡಿದ್ದೇನೆ. ಹೀಗಾಗಿ ನನ್ನನ್ನೇ ಸುದ್ದಿಗೊಷ್ಠಿಗೆ ಕಳುಹಿಸಿದ್ದಾರೆ’ ಎಂದಿದ್ದಾರೆ.