ಸಾರಾಂಶ
ನವದೆಹಲಿ: ಭಾರತೀಯ ಟೆನಿಸ್‌ನ ಅಗ್ರಗಣ್ಯ ಆಟಗಾರ, ಕರ್ನಾಟಕದ ರೋಹನ್ ಬೋಪಣ್ಣ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ದೇಶದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ಗುರುವಾರ ಕೇಂದ್ರ ಸರ್ಕಾರ ದೇಶದ 4ನೇ ಶ್ರೇಷ್ಠ ನಾಗರಿಕ ಪ್ರಶಸ್ತಿ ಪದ್ಮಶ್ರೀ ವಿಜೇತರನ್ನು ಘೋಷಿಸಿತು.ಗ್ರ್ಯಾನ್‌ಸ್ಲಾಂ ಟೂರ್ನಿ, ಡೇವಿಸ್ ಕಪ್ ಸೇರಿದಂತೆ ಜಾಗತಿಕ ಮಟ್ಟದ ವಿವಿಧ ಟೂರ್ನಿಗಳಲ್ಲಿ ಕರ್ನಾಟಕದ 43 ಟೆನಿಸಿಗ ಬೋಪಣ್ಣ ಅಭೂತಪೂರ್ವ ಪ್ರದರ್ಶನ ನೀಡಿದ್ದು, ದಿನಗಳ ಹಿಂದಷ್ಟೇ ಪುರುಷರ ಡಬಲ್ಸ್‌ನಲ್ಲಿ ವಿಶ್ವ ನಂ.1 ಸ್ಥಾನ ಖಚಿತಪಡಿಸಿಕೊಂಡಿದ್ದರು.ಇದೇ ವೇಳೆ ಸ್ಕ್ವ್ಯಾಶ್ ತಾರೆ ಜೋಶ್ನಾ ಚಿನ್ನಪ್ಪ, ಪ್ಯಾರಾ ಬ್ಯಾಡ್ಮಿಂಟನ್ ಕೋಚ್ ಗೌರವ್ ಖನ್ನಾ, ಮಲ್ಲಕಂಬವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ಪ್ರಮುಖ ಪಾತ್ರ ವಹಿಸುತ್ತಿರುವ ಮಹಾರಾಷ್ಟ್ರದ ಮಲ್ಲಕಂಬ ಕೋಚ್ ಉದಯ್ ವಿಶ್ವನಾಥ್ ದೇಶಪಾಂಡೆ, ಪ್ಯಾರಾ ಈಜು ಪಟು ಸತೇಂದ್ರ ಸಿಂಗ್ ಲೋಹಿಯಾ, ಖ್ಯಾತ ಆರ್ಚರಿ ಕೋಚ್ ಪೂರ್ಣಿಮಾ ಮಹಾತೊ, ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಭಾರತ ಹಾಕಿ ತಂಡದಲ್ಲಿದ್ದ ಹರ್ಬಿಂದರ್ ಸಿಂಗ್‌ಗೆ ಕೂಡಾ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.