ಟೆನಿಸ್‌ ವಿಶ್ವ ರ್‍ಯಾಂಕಿಂಗ್‌: 98ನೇ ಸ್ಥಾನಕ್ಕೆ ನಗಾಲ್‌

| Published : Feb 13 2024, 12:45 AM IST

ಟೆನಿಸ್‌ ವಿಶ್ವ ರ್‍ಯಾಂಕಿಂಗ್‌: 98ನೇ ಸ್ಥಾನಕ್ಕೆ ನಗಾಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಅಗ್ರ ಟೆನಿಸ್‌ ಆಟಗಾರ ಸುಮಿತ್‌ ನಗಾಲ್‌ ಮಂಗಳವಾರ ಪ್ರಕಟಗೊಂಡ ಎಟಿಪಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 23 ಸ್ಥಾನಗಳ ಏರಿಕೆ ಕಂಡಿದ್ದು, ಜೀವನಶ್ರೇಷ್ಠ 98ನೇ ಸ್ಥಾನ ಪಡೆದುಕೊಂಡಿದ್ದಾರೆ.

ನವದೆಹಲಿ: ಭಾರತದ ಅಗ್ರ ಟೆನಿಸ್‌ ಆಟಗಾರ ಸುಮಿತ್‌ ನಗಾಲ್‌ ಮಂಗಳವಾರ ಪ್ರಕಟಗೊಂಡ ಎಟಿಪಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 23 ಸ್ಥಾನಗಳ ಏರಿಕೆ ಕಂಡಿದ್ದು, ಜೀವನಶ್ರೇಷ್ಠ 98ನೇ ಸ್ಥಾನ ಪಡೆದುಕೊಂಡಿದ್ದಾರೆ.ಭಾನುವಾರ ಚೆನೈ ಓಪನ್‌ ಟೆನಿಸ್‌ ಕಿರೀಟ ಗೆದ್ದಿದ್ದ ನಗಾಲ್‌ ಅಗ್ರ 100ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದರು. ಭಾರತದ ಪ್ರಜ್ಞೇಶ್‌ ಗುನೇಶ್ವರನ್‌ ಕೊನೆಯದಾಗಿ 2019ರಲ್ಲಿ ಅಗ್ರ 100ರಲ್ಲಿ ಕಾಣಿಸಿಕೊಂಡಿದ್ದರು. 1980 ವಿಜಯ್ ಅಮೃತರಾಜ್ 18ನೇ ಸ್ಥಾನ ಪಡೆದಿದ್ದು, ಈ ವರೆಗೂ ಭಾರತೀಯರ ಪೈಕಿ ಗರಿಷ್ಠ ರ್‍ಯಾಂಕಿಂಗ್‌.

ನಗಾಲ್‌ ದಾಖಲೆ:

ನಗಾಲ್‌ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಅಗ್ರ-100ರಲ್ಲಿ ಸ್ಥಾನ ಪಡೆದ 11ನೇ ಭಾರತೀಯ. ಈ ಮೊದಲು ಪುರುಷರ ಟೆನಿಸ್‌ನಲ್ಲಿ ಜಸ್‌ಜೀತ್‌ ಸಿಂಗ್‌, ಆನಂದ್‌ ಅಮೃತ್‌ರಾಜ್‌, ಶಶಿ ಮೆನನ್‌, ವಿಜಯ್‌ ಅಮೃತ್‌ರಾಜ್‌, ರಮೇಶ್‌ ಕೃಷ್ಣನ್‌, ಲಿಯಾಂಡರ್‌ ಪೇಸ್‌, ಸೋಮ್‌ದೇವ್‌ ದೇವ್‌ವರ್ಮನ್‌, ಯೂಕಿ ಭಾಂಬ್ರಿ, ಪ್ರಜ್ಞೇಶ್‌ ಗುನೇಶ್ವರನ್‌, ಮಹಿಳಾ ವಿಭಾಗದಲ್ಲಿ ಸಾನಿಯಾ ಮಿರ್ಜಾ ಅಗ್ರ-100ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.

ಭಾರತೀಯರ ಪೈಕಿ ಗರಿಷ್ಠ ರ್‍ಯಾಂಕಿಂಗ್‌.ಆಟಗಾರರು ಶ್ರೇಷ್ಠ ರ್‍ಯಾಂಕಿಂಗ್‌ ವರ್ಷಜಸ್‌ಜೀತ್‌ ಸಿಂಗ್‌ 89 1974ಆನಂದ್‌ ಅಮೃತ್‌ರಾಜ್‌ 74 1974ಶಶಿ ಮೆನನ್‌ 71 1975ವಿಜಯ್‌ ಅಮೃತ್‌ರಾಜ್‌ 18 1980ರಮೇಶ್‌ ಕೃಷ್ಣನ್‌ 23 1985ಲಿಯಾಂಡರ್‌ ಪೇಸ್‌ 73 1998ಸೋಮ್‌ದೇವ್‌ ದೇವರ್ಮನ್‌ 62 2011ಯೂಕಿ ಬಾಂಬ್ರಿ 83 2018ಪ್ರಜ್ಞೇಶ್‌ ಗುನೇಶ್ವರನ್‌ 75 2019ಸುಮಿತ್‌ ನಗಾಲ್‌ 98 2024