ಇಂದು ಚೆನ್ನೈ ಕಿಂಗ್ಸ್‌ vs ಗುಜರಾತ್‌ ಟೈಟಾನ್ಸ್‌ ಬಿಗ್‌ ಫೈಟ್‌

| Published : Mar 26 2024, 01:07 AM IST / Updated: Mar 26 2024, 09:05 AM IST

ಇಂದು ಚೆನ್ನೈ ಕಿಂಗ್ಸ್‌ vs ಗುಜರಾತ್‌ ಟೈಟಾನ್ಸ್‌ ಬಿಗ್‌ ಫೈಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಗೆದ್ದು ಶುಭಾರಂಭ ಮಾಡಿರುವ ಇತ್ತಂಡಗಳಿಗೂ ಸತತ 2ನೇ ಜಯದ ತವಕ. ಚೆನ್ನೈನ ಋತುರಾಜ್‌ ಗಾಯಕ್ವಾಡ್‌ ಮತ್ತು ಗುಜರಾತ್‌ನ ಶುಭ್‌ಮನ್‌ ಗಿಲ್‌ ಇಬ್ಬರಿಗೂ ಮೊದಲ ಬಾರಿ ಐಪಿಎಲ್‌ನಲ್ಲಿ ನಾಯಕತ್ವ. ಗೆಲುವಿನ ಓಟ ಮುಂದುವರಿಸುವ ಕಾತರ.

ಚೆನ್ನೈ: ಇಬ್ಬರು ಯುವ ನಾಯಕರೊಂದಿಗೆ ಕಣಕ್ಕಿಳಿದಿರುವ, ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿರುವ, ಕ್ರಮವಾಗಿ ಕಳೆದೆರಡು ಆವೃತ್ತಿಗಳ ಚಾಂಪಿಯನ್‌ ತಂಡಗಳಾದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ಮಂಗಳವಾರ ಪರಸ್ಪರ ಮುಖಾಮುಖಿಯಾಗಲಿವೆ. 

ಪಂದ್ಯಕ್ಕೆ ಚೆಪಾಕ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.5 ಬಾರಿ ಚಾಂಪಿಯನ್‌ ಚೆನ್ನೈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗೆದ್ದಿದ್ದರೆ, ಮುಂಬೈಯನ್ನು ಮಣಿಸಿ ಗುಜರಾತ್‌ ಶುಭಾರಂಭ ಮಾಡಿತ್ತು. 

ಚೆನ್ನೈನ ಋತುರಾಜ್‌ ಗಾಯಕ್ವಾಡ್‌ ಮತ್ತು ಗುಜರಾತ್‌ನ ಶುಭ್‌ಮನ್‌ ಗಿಲ್‌ ಇಬ್ಬರೂ ಮೊದಲ ಬಾರಿ ಐಪಿಎಲ್‌ನಲ್ಲಿ ನಾಯಕತ್ವ ವಹಿಸುತ್ತಿದ್ದು, ಗೆಲುವಿನ ಓಟ ಮುಂದುವರಿಸುವ ಕಾತರದಲ್ಲಿದ್ದಾರೆ.

ಚೆನ್ನೈನ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದ್ದು, ರಚಿನ್‌ ರವೀಂದ್ರ, ಡ್ಯಾರಿಲ್‌ ಮಿಚೆಲ್‌, ಶಿವಂ ದುಬೆ, ರವೀಂದ್ರ ಜಡೇಜಾ ಲಯ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ. 

ಮುಸ್ತಾಫಿಜುರ್‌ ರಹ್ಮಾನ್‌ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದು, ಈ ಪಂದ್ಯದಲ್ಲಿ ತುಷಾರ್‌ ದೇಶಪಾಂಡೆ ಬದಲು ಶಾರ್ದೂಲ್‌ ಠಾಕೂರ್‌ ಅಥವಾ ಮುಕೇಶ್‌ ಚೌಧರಿ ಕಣಕ್ಕಿಳಿಯಬಹುದು.

ಅತ್ತ ಗುಜರಾತ್‌ ಕಳೆದ ಆವೃತ್ತಿ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಈ ಪಂದ್ಯದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಆಡುವ ಸಾಧ್ಯತೆಯಿದೆ. ಗಿಲ್‌, ಸಾಯಿ ಸುದರ್ಶನ್‌, ರಶೀದ್‌ ಖಾನ್ ಪ್ರದರ್ಶನ ನಿರ್ಣಾಯಕವೆನಿಸಿದೆ. ಒಟ್ಟು ಮುಖಾಮುಖಿ: 05

ಚೆನ್ನೈ: 03

ಗುಜರಾತ್‌: 02

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಋತುರಾಜ್‌(ನಾಯಕ), ರಚಿನ್‌, ರಹಾನೆ, ಡ್ಯಾರಿಲ್‌ ಮಿಚೆಲ್‌, ಜಡೇಜಾ, ಸಮೀರ್‌, ಧೋನಿ, ದೀಪಕ್‌, ತೀಕ್ಷಣ, ತುಷಾರ್‌, ಮುಸ್ತಾಫಿಜುರ್‌.

ಗುಜರಾತ್: ಗಿಲ್‌(ನಾಯಕ), ಸಾಹ, ಸುದರ್ಶನ್‌, ಮಿಲ್ಲರ್‌, ಅಜ್ಮತುಲ್ಲಾ, ತೆವಾಟಿಯಾ, ರಶೀದ್‌, ಉಮೇಶ್‌, ಕಿಶೋರ್‌, ಸ್ಪೆನ್ಸರ್‌, ಮೋಹಿತ್‌ ಶರ್ಮಾ.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.