ಅಂತಾರಾಷ್ಟ್ರೀಯ ಟಿ20 : ಸೆಂಚೂರಿಯನ್‌ನಲ್ಲಿ ಭಾರತ ಪರ ತಿಲಕ್‌ ವರ್ಮಾ ಸೆಂಚುರಿ ಧಮಾಕ!

| Published : Nov 14 2024, 12:47 AM IST / Updated: Nov 14 2024, 04:11 AM IST

ಅಂತಾರಾಷ್ಟ್ರೀಯ ಟಿ20 : ಸೆಂಚೂರಿಯನ್‌ನಲ್ಲಿ ಭಾರತ ಪರ ತಿಲಕ್‌ ವರ್ಮಾ ಸೆಂಚುರಿ ಧಮಾಕ!
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಪರ ಅಂತಾರಾಷ್ಟ್ರೀಯ ಟಿ20ಯಲ್ಲಿ ಶತಕ ಸಿಡಿಸಿದ ಭಾರತದ 12ನೇ ಬ್ಯಾಟರ್‌ ತಿಲಕ್‌ ವರ್ಮಾ. ಕೇವಲ 51 ಎಸೆತದಲ್ಲಿ ಸೆಂಚುರಿ ಸಿಡಿಸಿದ ಎಡಗೈ ಬ್ಯಾಟರ್‌. ಈ ವರ್ಷ ಟಿ20ಯಲ್ಲಿ ಭಾರತೀಯ ಬ್ಯಾಟರ್‌ಗಳಿಂದ ದಾಖಲಾದ 5ನೇ ಶತಕ.

ಸೆಂಚೂರಿಯನ್‌: ಸೂಪರ್‌ ಸ್ಪೋರ್ಟ್‌ ಪಾರ್ಕ್‌ ಬುಧವಾರ ನಿರೀಕ್ಷೆಯಂತೆಯೇ ರನ್‌ ಹೊಳೆಗೆ ಸಾಕ್ಷಿಯಾಗಿದ್ದಲ್ಲದೇ, ಭಾರತದ ಭವಿಷ್ಯದ ಸೂಪರ್‌ ಎಂದೇ ಕರೆಸಿಕೊಳ್ಳುತ್ತಿರುವ ತಿಲಕ್‌ ವರ್ಮಾ ಅವರ ಅಮೋಘ ಶತಕಕ್ಕೂ ವೇದಿಕೆ ಒದಗಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ ತಿಲಕ್‌, ಅಂತಾರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಶತಕ ಬಾರಿಸಿದರು. ಅಲ್ಲದೇ ಈ ಮಾದರಿಯಲ್ಲಿ ಶತಕ ಬಾರಿಸಿದ ಭಾರತದ 12ನೇ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು.

ಬುಧವಾರ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿಸಲ್ಪಟ್ಟ ಭಾರತ, ಆರಂಭದಲ್ಲೇ ಸಂಜು ಸ್ಯಾಮ್ಸನ್‌ರ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಾಯಕ ಸೂರ್ಯಕುಮಾರ್‌ ಬದಲು 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ತಿಲಕ್‌ ಅಬ್ಬರಿಸಿದರು.

ತಮ್ಮ ಇನ್ನಿಂಗ್ಸ್‌ನ ಆರಂಭದಲ್ಲಿ ಅಭಿಷೇಕ್‌ ಶರ್ಮಾಗೆ ಹೆಚ್ಚು ಎಸೆತಗಳನ್ನು ಎದುರಿಸಲು ಬಿಟ್ಟು, ತಾವು ಪರಿಸ್ಥಿತಿಗೆ ತಕ್ಕಂತೆ ಆಡಿದ ತಿಲಕ್‌ ಇನ್ನಿಂಗ್ಸ್‌ ಸಾಗಿದಂತೆ ತಮ್ಮ ಆಕ್ರಮಣಕಾರಿ ಆಟವನ್ನು ಆರಂಭಿಸಿದರು.

ಕೇವಲ 51 ಎಸೆತಗಳಲ್ಲಿ ಶತಕ ಪೂರೈಸಿದ ತಿಲಕ್‌, 56 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 107 ರನ್‌ ಸಿಡಿಸಿ ಔಟಾಗದೆ ಉಳಿದರು. ಹೈದ್ರಾಬಾದ್‌ನ ಎಡಗೈ ಬ್ಯಾಟರ್‌ನ ಅಮೋಘ ಶತಕದ ನೆರವಿನಿಂದ ಭಾರತ 20 ಓವರಲ್ಲಿ 6 ವಿಕೆಟ್‌ಗೆ 219 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಅಂ.ರಾ. ಟಿ20ಯಲ್ಲಿ ಶತಕ ಸಿಡಿಸಿದ ಭಾರತೀಯರು

ಆಟಗಾರಒಟ್ಟು ಶತಕ

ರೋಹಿತ್‌ ಶರ್ಮಾ5

ಸೂರ್ಯಕುಮಾರ್‌4

ಸಂಜು ಸ್ಯಾಮ್ಸನ್‌2

ಕೆ.ಎಲ್‌.ರಾಹುಲ್‌2

ಶುಭ್‌ಮನ್‌ ಗಿಲ್‌1

ಋತುರಾಜ್‌1

ವಿರಾಟ್‌ ಕೊಹ್ಲಿ1

ದೀಪಕ್‌ ಹೂಡಾ1

ಸುರೇಶ್‌ ರೈನಾ1

ಯಶಸ್ವಿ ಜೈಸ್ವಾಲ್‌1

ಅಭಿಷೇಕ್‌ ಶರ್ಮಾ1

ತಿಲಕ್‌ ವರ್ಮಾ1

ಸತತ 3ನೇ ವರ್ಷ ಭಾರತ ‘ಶತಕ’ ದಾಖಲೆ!

ಅಂ.ರಾ. ಟಿ20ಯಲ್ಲಿ ಕಳೆದ 3 ವರ್ಷದಿಂದ ಭಾರತೀಯರೇ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ. ತಿಲಕ್‌ರಿಂದ ದಾಖಲಾದ ಶತಕ ಈ ವರ್ಷ ಭಾರತೀಯರಿಂದ ದಾಖಲಾದ 5ನೇ ಶತಕ ಎನಿಸಿದೆ. 2023ರಲ್ಲೂ ಭಾರತೀಯರು 5 ಶತಕ ಬಾರಿಸಿದ್ದರು. ಇನ್ನು 2022ರಲ್ಲಿ ಭಾರತದಿಂದ 4 ಶತಕ ದಾಖಲಾಗಿತ್ತು. ====

12 ಆಟಗಾರರು

ಅಂ.ರಾ. ಟಿ20ಯಲ್ಲಿ ಭಾರತದ 12 ಆಟಗಾರರು ಶತಕ ಬಾರಿಸಿದ್ದಾರೆ. ಯಾವುದೇ ತಂಡದ ಪರ ಇದು ಗರಿಷ್ಠ. ಇಂಗ್ಲೆಂಡ್‌, ದ.ಆಫ್ರಿಕಾ ಪರ ತಲಾ 6 ಆಟಗಾರರಿಂದ ಶತಕ ದಾಖಲಾಗಿದ್ದು, ಜಂಟಿ 2ನೇ ಸ್ಥಾನ ಪಡೆದಿವೆ. 05 ಶತಕ

2024ರಲ್ಲಿ ಟಿ20 ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರರಿಂದ ದಾಖಲಾದ 5ನೇ ಶತಕವಿದು.