ಪ್ಯಾರಿಸ್‌ ಒಲಿಂಪಿಕ್ಸ್‌: ಟೇಬಲ್‌ ಟೆನಿಸ್‌ನಲ್ಲಿ ಮನಿಕಾಗೆ ಸೋಲು, ಪ್ರಿ ಕ್ವಾರ್ಟರ್‌ಗೆ ಶ್ರೀಜಾ

| Published : Aug 01 2024, 12:15 AM IST / Updated: Aug 01 2024, 05:22 AM IST

ಪ್ಯಾರಿಸ್‌ ಒಲಿಂಪಿಕ್ಸ್‌: ಟೇಬಲ್‌ ಟೆನಿಸ್‌ನಲ್ಲಿ ಮನಿಕಾಗೆ ಸೋಲು, ಪ್ರಿ ಕ್ವಾರ್ಟರ್‌ಗೆ ಶ್ರೀಜಾ
Share this Article
  • FB
  • TW
  • Linkdin
  • Email

ಸಾರಾಂಶ

ಟೇಬಲ್‌ ಟೆನಿಸ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಮನಿಕಾ ಬಾತ್ರಾಗೆ ಸೋಲು. ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತದ ನಂ.1 ಆಟಗಾರ್ತಿ ಶ್ರೀಜಾ ಅಕುಲಾ.

ಪ್ಯಾರಿಸ್‌:  ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ತಾರಾ ಟೇಬಲ್‌ ಟೆನಿಸ್‌ ಆಟಗಾರ್ತಿ ಮನಿಕಾ ಬಾತ್ರಾರ ಸವಾಲು ಮುಕ್ತಾಯಗೊಂಡಿದೆ. ಮಹಿಳಾ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ಬುಧವಾರ ಮನಿಕಾ, ಜಪಾನ್‌ನ ಮಿಯು ಹಿರಾನೊ ವಿರುದ್ಧ 6-11, 9-11, 11-9, 14-12, 8-11, 6-11 ಗೇಮ್‌ಗಳಲ್ಲಿ ಸೋಲುಂಡರು. ಮಿಯು ವಿರುದ್ಧ ಮನಿಕಾಗೆ ಇದು ಸತತ 5ನೇ ಸೋಲು.

ಇದೇ ವೇಳೆ ಭಾರತದ ಯುವ ಟೇಬಲ್‌ ಟೆನಿಸ್‌ ಆಟಗಾರ್ತಿ ಶ್ರೀಜಾ ಅಕುಲಾ, ಪ್ಯಾರಿಸ್‌ ಗೇಮ್ಸ್‌ನ ಮಹಿಳಾ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಅಂತಿಮ 32ರ ಸುತ್ತಿನಲ್ಲಿ ಬುಧವಾರ, ಸಿಂಗಾಪುರದ ಜಿಯಾನ್‌ ಝೆಂಗ್‌ ವಿರುದ್ಧ 9-11, 12-10, 11-4, 11-5, 10-12, 12-10 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.

ಒಲಿಂಪಿಕ್ಸ್‌ ಟಿಟಿ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಹಂತಕ್ಕೇರಿದ ಭಾರತದ 2ನೇ ಆಟಗಾರ್ತಿ ಎನ್ನುವ ಹಿರಿಮೆಗೆ ಹೈದ್ರಾಬಾದ್‌ನ 26 ವರ್ಷದ ಶ್ರೀಜಾ ಪಾತ್ರರಾದರು. ಅಂತಿಮ 16ರ ಸುತ್ತಿನಲ್ಲಿ 2 ಬಾರಿ ರಾಷ್ಟ್ರೀಯ ಚಾಂಪಿಯನ್‌, ಹಾಲಿ ಭಾರತದ ನಂ.1 ಆಟಗಾರ್ತಿ ಶ್ರೀಜಾಗೆ ಹಾಲಿ ವಿಶ್ವ ನಂ.1 ಚೀನಾದ ಸುನ್‌ ಯಿಂಗ್‌ಶಾ ಎದುರಾಗಲಿದ್ದಾರೆ.