ಅಂ-19 ವಿಶ್ವಕಪ್‌: ಭಾರತಕ್ಕೆ ಬೃಹತ್‌ ಜಯಭೇರಿ

| Published : Jan 26 2024, 01:46 AM IST

ಸಾರಾಂಶ

ಅಂಡರ್‌-19 ವಿಶ್ವಕಪ್‌ನಲ್ಲಿ 5 ಬಾರಿ ಚಾಂಪಿಯನ್‌ ಭಾರತ ಸತತ 2ನೇ ಗೆಲುವು ದಾಖಲಿಸಿದ್ದು, ಐರ್ಲೆಂಡ್‌ ವಿರುದ್ಧ 201 ರನ್ ಬೃಹತ್‌ ಗೆಲುವು ಲಭಿಸಿತು.

ಬ್ಲೂಮ್‌ಫಂಟೀನ್‌(ದ.ಆಫ್ರಿಕಾ): ಅಂಡರ್‌-19 ವಿಶ್ವಕಪ್‌ನಲ್ಲಿ 5 ಬಾರಿ ಚಾಂಪಿಯನ್‌ ಭಾರತ ಸತತ 2ನೇ ಗೆಲುವು ದಾಖಲಿಸಿದೆ. ಗುರುವಾರ ಭಾರತಕ್ಕೆ ಐರ್ಲೆಂಡ್‌ ವಿರುದ್ಧ 201 ರನ್ ಬೃಹತ್‌ ಗೆಲುವು ಲಭಿಸಿತು. ಇದರೊಂದಿಗೆ ಭಾರತ ಸೂಪರ್‌-6 ಹಂತಕ್ಕೆ ಬಹುತೇಕ ಪ್ರವೇಶ ಪಡೆದುಕೊಂಡಿದೆ.ಮೊದಲು ಬ್ಯಾಟ್‌ ಮಾಡಿದ ಭಾರತ ಮುಶೀರ್‌ ಖಾನ್‌ ಭರ್ಜರಿ ಶತಕದ ನೆರವಿನಿಂದ 7 ವಿಕೆಟ್‌ಗೆ 301 ರನ್‌ ಕಲೆಹಾಕಿತು. ಮುಶೀರ್‌ 106 ಎಸೆತಗಳಲ್ಲಿ 118 ರನ್‌ ಸಿಡಿಸಿದರು. ನಾಯಕ ಉದಯ್‌ ಸಹರನ್‌(75) ಸತತ 2ನೇ ಅರ್ಧಶತಕ ಸಿಡಿಸಿದರು. ಅರ್ಶಿನ್‌ ಕುಲ್ಕರ್ಣಿ 32, ಅವಾನಿಶ್‌ 22, ಸಚಿನ್‌ ದಾಸ್‌ ಔಟಾಗದೆ 21(9 ಎಸೆತ) ಕೊಡುಗೆ ನೀಡಿದರು.ಬೃಹತ್‌ ಗುರಿ ಬೆನ್ನತ್ತಿ ಐರ್ಲೆಂಡ್‌ 29.4 ಓವರ್‌ಗಳಲ್ಲಿ 100 ರನ್‌ಗೆ ಆಲೌಟಾಯಿತು. 10ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಡ್ಯಾನಿಲ್‌ ಫೊರ್ಕಿನ್‌(27) ತಂಡದ ಪರ ಗರಿಷ್ಠ ಮೊತ್ತ ಗಳಿಸಿದರು. ನಮನ್‌ ತಿವಾರಿ 4, ಸೌಮಿ ಪಾಂಡೆ 3 ವಿಕೆಟ್‌ ಕಿತ್ತರು.ಸ್ಕೋರ್‌: ಭಾರತ 50 ಓವರಲ್ಲಿ 301/7(ಮುಶೀರ್‌ 118, ಉದಯ್‌ 75, ಓಲಿವರ್‌ 3-55), ಐರ್ಲೆಂಡ್‌ 29.4 ಓವರ್‌ಗಳಲ್ಲಿ 100/10(ಫೊರ್ಕಿನ್‌ 27*, ನಮನ್‌ 4-53, ಸೌಮಿ 3-21)