ಕಿರಿಯರ ವಿಶ್ವಕಪ್‌: ಇಂದು ಭಾರತ vs ಬಾಂಗ್ಲಾ ಫೈಟ್‌

| Published : Jan 20 2024, 02:02 AM IST

ಸಾರಾಂಶ

15ನೇ ಆವೃತ್ತಿಯ ಟೂರ್ನಿಯಲ್ಲಿ 5 ಬಾರಿ ಚಾಂಪಿಯನ್‌ ಭಾರತಕ್ಕೆ ಶುಭಾರಂಭ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಅಂಡರ್‌-19 ಏಷ್ಯಾಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತಿದ್ದ ಭಾರತ, ಶನಿವಾರ ನಡೆಯುವ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ.

ಬ್ಲೂಮ್‌ಫಂಟೀನ್‌(ದ.ಆಫ್ರಿಕಾ): ದಾಖಲೆಯ 5 ಬಾರಿ ಪ್ರಶಸ್ತಿ ಗೆದ್ದು ಅಂಡರ್‌-19 ವಿಶ್ವಕಪ್‌ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಭಾರತ 15ನೇ ಆವೃತ್ತಿಯ ಟೂರ್ನಿಯಲ್ಲೂ ಶುಭಾರಂಭದ ನಿರೀಕ್ಷೆಯಲ್ಲಿದ್ದು, ಶನಿವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ.ಉದಯ್‌ ಶಹರಾನ್‌ ನಾಯಕತ್ವದ ಭಾರತ ‘ಎ’ ಗುಂಪಿನಲ್ಲಿದ್ದು, ಗುಂಪು ಹಂತದಲ್ಲಿ ಒಟ್ಟು 3 ಪಂದ್ಯಗಳನ್ನಾಡಲಿದೆ. ಜ.25ಕ್ಕೆ ಐರ್ಲೆಂಡ್‌, ಜ.28ಕ್ಕೆ ಅಮೆರಿಕ ವಿರುದ್ಧ ಆಡಬೇಕಿದೆ. ಇತ್ತೀಚೆಗಷ್ಟೇ ಅಂಡರ್‌-19 ಏಷ್ಯಾಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತಿದ್ದ ಭಾರತ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ. ಆಲ್ರೌಂಡರ್‌ ಅರ್ಶಿನ್‌ ಕುಲ್ಕರ್ಣಿ, ಎಡಗೈ ಸ್ಪಿನ್ನರ್‌ ಸೌಮಿ ಕುಮಾರ್‌, ಬ್ಯಾಟರ್‌ಗಳಾದ ಮುಶೀರ್‌ ಖಾನ್‌, ಅರವೆಲ್ಲಿ ಅವಾನಿಶ್‌, ವೇಗಿ ರಾಜ್‌ ಲಿಂಬಾನಿ ಸೇರಿದಂತೆ ತಾರಾ ಆಟಗಾರರು ಭಾರತ ತಂಡದಲ್ಲಿದ್ದು, ಧನುಶ್‌ ಗೌಡ ತಂಡದಲ್ಲಿರುವ ಏಕೈಕ ಕನ್ನಡಿಗ ಎನಿಸಿಕೊಂಡಿದ್ದಾರೆ.ಶನಿವಾರ ಮತ್ತೆರಡು ಪಂದ್ಯಗಳು ನಡೆಯಲಿದ್ದು, ಇಂಗ್ಲೆಂಡ್‌-ಸ್ಕಾಟ್ಲೆಂಡ್‌, ಪಾಕಿಸ್ತಾನ-ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ.ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರಪ್ರಸಾರ: ಡಿಸ್ನಿ+ಹಾಟ್‌ಸ್ಟಾರ್‌, ಸ್ಟಾರ್‌ಸ್ಪೋರ್ಟ್ಸ್‌.