ಸಾರಾಂಶ
ನ್ಯೂಯಾರ್ಕ್: 2022ರ ಚಾಂಪಿಯನ್‌ಗಳಾದ ಇಗಾ ಸ್ವಿಯಾಟೆಕ್ ಹಾಗೂ ಆಲ್ಕರಜ್ ಈ ಬಾರಿ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. 2 ಬಾರಿ ಚಾಂಪಿಯನ್ ನವೊಮಿ ಒಸಾಕ, ವಿಶ್ವ ನಂ.1 ಯಾನಿಕ್ ಸಿನ್ನರ್ ಕೂಡಾ 2ನೇ ಸುತ್ತು ಪ್ರವೇಶಿಸಿದ್ದಾರೆ.
ಮಂಗಳವಾರ ಮಧ್ಯರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ 2ನೇ ಶ್ರೇಯಾಂಕಿತ ಆಲ್ಕರಜ್, ಆಸ್ಟ್ರೇಲಿಯಾದ ಲಿ ಟು ವಿರುದ್ಧ 6-2, 4-6, 6-3, 6-1 ಸೆಟ್‌ಗಳಲ್ಲಿ ಜಯಗಳಿಸಿದರು. ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ಇಟಲಿಯ 23ರ ಸಿನ್ನರ್ ಮೊದಲ ಸುತ್ತಿನಲ್ಲಿ ಅಮೆರಿಕದ ಮೆಕೆನ್ಜೀ ಮೆಕ್‌ಡೊನಾಲ್ಡ್ ವಿರುದ್ಧ 2-6, 6-2, 6-1, 6-2 ಸೆಟ್‌ಗಳಲ್ಲಿ ಗೆದ್ದರು. 2021ರ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೆವ್ ಕೂಡಾ ಶುಭಾರಂಭ ಮಾಡಿದರು. ಆದರೆ ಸ್ಟಾನ್ ವಾಂವ್ರಿಕಾ, 11ನೇ ಶ್ರೇಯಾಂಕಿತ ಸ್ಟೆಫಾನೊಸ್ ಸಿಟ್ಸಿಪಾಸ್ ಮೊದಲ ಸುತ್ತಲ್ಲೇ ಸೋತು ಹೊರಬಿದ್ದರು.
ಇಗಾ ಮುನ್ನಡೆ: ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ವಿಶ್ವ ನಂ.1, ಪೋಲೆಂಡ್‌ನ ರಷ್ಯಾದ ಕಾಮಿಲ್ಲಾ ರಖಿಮೋವಾ 6-4, 7-6(8/6) ಅಂತರದಲ್ಲಿ ಗೆದ್ದರು. ಮಾಜಿ ವಿಶ್ವ ನಂ.1, ಜಪಾನ್‌ನ ಒಸಾಕ ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೊ ವಿರುದ್ಧ 6-3, 6-2ರಲ್ಲಿ ಗೆದ್ದರು. 2022ರ ವಿಂಬಲ್ಡನ್ ಚಾಂಪಿಯನ್ ಎಲೆನಾ ರಬೈಕೆನಾ, ಕಳೆದೆರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅರೈನಾ ಸಬಲೆಂಕಾ ಕೂಡಾ 2ನೇ ಸುತ್ತು ತಲುಪಿದರು. ಆದರೆ 2021ರ ಚಾಂಪಿಯನ್ ಎಮ್ಮಾ ರಾಡುಕಾನು ಸೋಲನುಭವಿಸಿದರು.