ಸಾರಾಂಶ
ಹಾಲಿ ಚಾಂಪಿಯನ್ ಜೋಕೋಗೆ ಸುಲಭ ಜಯ. 25ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಜೋಕೋವಿಚ್. ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್ ಕೊಕೊ ಗಾಫ್ ಕೂಡ ಶುಭಾರಂಭ.
ನ್ಯೂಯಾರ್ಕ್: 25ನೇ ಗ್ರ್ಯಾನ್ ಸ್ಲಾಂ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿರುವ ಸರ್ಬಿಯಾದ ಟೆನಿಸ್ ದೊರೆ ನೋವಾಕ್ ಜೋಕೋವಿಚ್, ಯುಎಸ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಹಾಲಿ ಚಾಂಪಿಯನ್ ಜೋಕೋವಿಚ್, ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಮಾಲ್ಡೋವಾದ ರಾಡು ಅಲ್ಬೊಟ್ ವಿರುದ್ಧ 6-2, 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.
ದ್ವಿತೀಯ ಶ್ರೇಯಾಂಕಿತ ಜೋಕೋಗೆ ಇದು ಯುಎಸ್ ಓಪನ್‌ನ ಮೊದಲ ಸುತ್ತಿನಲ್ಲಿ ಸತತ 18ನೇ ಗೆಲುವು. 2ನೇ ಸುತ್ತಿನಲ್ಲಿ ಜೋಕೋಗೆ ಸರ್ಬಿಯಾದವರೇ ಆದ ಲಾಸ್ಲೊ ಜೆರೆ ಎದುರಾಗಲಿದ್ದಾರೆ.ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್, ಅಮೆರಿಕದ ಕೊಕೊ ಗಾಫ್ ಸಹ ಮೊದಲ ಸುತ್ತಿನಲ್ಲಿ ಸುಲಭ ಗೆಲುವಿನೊಂದಿಗೆ 2ನೇ ಸುತ್ತಿಗೇರಿದ್ದಾರೆ. ಕೊಕೊಗೆ ಫ್ರಾನ್ಸ್‌ನ ವರ್ವಾರಾ ಗ್ರಚೆವಾ ವಿರುದ್ಧ 6-2, 6-0 ಸೆಟ್‌ಗಳಲ್ಲಿ ಜಯ ದೊರೆಯಿತು. ಸುಮಿತ್ ನಗಾಲ್ ಔಟ್
ಪುರುಷರ ಸಿಂಗಲ್ಸ್‌ನ ಪ್ರಧಾನ ಸುತ್ತಿಗೆ ನೇರ ಅರ್ಹತೆ ಪಡೆದಿದ್ದ ಭಾರತದ ಸುಮಿತ್ ನಗಾಲ್, ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ನೆದರ್‌ಲೆಂಡ್ಸ್‌ನ ಟ್ಯಾಲೊನ್ ಗ್ರೀಕ್ಸ್‌ಪೂರ್ ವಿರುದ್ಧ 1-6, 3-6, 6-7 ಸೆಟ್‌ಗಳಲ್ಲಿ ಸೋಲುಂಡರು.