ಚಿನ್ನಸ್ವಾಮಿಯಲ್ಲಿ ವಿರಾಟ್‌ ಕೊಹ್ಲಿ ದಾಖಲೆಗಳ ಸುರಿಮಳೆ

| Published : Mar 26 2024, 01:05 AM IST

ಚಿನ್ನಸ್ವಾಮಿಯಲ್ಲಿ ವಿರಾಟ್‌ ಕೊಹ್ಲಿ ದಾಖಲೆಗಳ ಸುರಿಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 100ನೇ 50 ಸ್ಕೋರ್‌ ಮೈಲುಗಲ್ಲು ಸಾಧಿಸಿದರು. ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ 3ನೇ ಬ್ಯಾಟರ್‌. ಚಿನ್ನಸ್ವಾಮಿಯಲ್ಲಿ 25 ಅರ್ಧಶತಕದ ಮೈಲುಗಲ್ಲನ್ನೂ ಅವರು ಸಾಧಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರುಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿಯ ದಿಗ್ಗಜ ವಿರಾಟ್‌ ಕೊಹ್ಲಿ ತಮ್ಮ ಅಭೂತಪೂರ್ವ ಆಟದಿಂದ ತಂಡವನ್ನು ಗೆಲ್ಲಿಸುವುದರ ಜೊತೆಗೆ ಹಲವು ದಾಖಲೆಗಳನ್ನು ಸೃಷ್ಟಿಸಿದರು.

ಟಿ20ಯಲ್ಲಿ 100ನೇ 50+ ಸ್ಕೋರ್‌

ಪಂಜಾಬ್‌ ವಿರುದ್ಧ 77 ರನ್‌ ಸಿಡಿಸಿದ ಕೊಹ್ಲಿ ಟ20 ಕ್ರಿಕೆಟ್‌ನಲ್ಲಿ 100ನೇ 50+ ಸ್ಕೋರ್‌ ಮೈಲುಗಲ್ಲು ಸಾಧಿಸಿದರು. ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ 3ನೇ ಬ್ಯಾಟರ್‌. ಕೊಹ್ಲಿ 377 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು. ವೆಸ್ಟ್ಇಂಡೀಸ್‌ನ ಕ್ರಿಸ್‌ ಗೇಲ್‌ 110, ಡೇವಿಡ್‌ ವಾರ್ನರ್ 109 ಬಾರಿ ಟಿ20 ಕ್ರಿಕೆಟ್‌ನಲ್ಲಿ 50+ ರನ್ ಗಳಿಸಿದ್ದಾರೆ. 81 ಬಾರಿ ಈ ಸಾಧನೆ ಮಾಡಿರುವ ರೋಹಿತ್‌ ಶರ್ಮಾ ಭಾರತೀಯರ ಪೈಕಿ 2ನೇ ಸ್ಥಾನದಲ್ಲಿದ್ದಾರೆ.

ಚಿನ್ನಸ್ವಾಮಿಯಲ್ಲಿ 25 ಫಿಫ್ಟಿ!ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನಲ್ಲಿ 25ನೇ ಅರ್ಧಶತಕ ಬಾರಿಸಿದರು. ಇದು ಕ್ರೀಡಾಂಗಣವೊಂದರಲ್ಲಿ ಆಟಗಾರ ಬಾರಿಸಿದ ಗರಿಷ್ಠ ಫಿಫ್ಟಿ. ವಾರ್ನರ್‌ ಹೈದರಾಬಾದ್‌ನಲ್ಲಿ 18, ವಿಲಿಯರ್ಸ್‌ ಚಿನ್ನಸ್ವಾಮಿಯಲ್ಲಿ 16, ರೋಹಿತ್‌ ಶರ್ಮಾ ಮುಂಬೈನ ವಾಂಖೇಡೆಯಲ್ಲಿ 15 ಬಾರಿ ಈ ಸಾಧನೆ ಮಾಡಿದ್ದಾರೆ.51 ಫಿಫ್ಟಿ: ಧವನ್‌ರನ್ನು ಹಿಂದಿಕ್ಕಿದ ವಿರಾಟ್‌

ಕೊಹ್ಲಿ ಐಪಿಎಲ್‌ನಲ್ಲಿ 51ನೇ ಅರ್ಧಶತಕ ಬಾರಿಸಿದರು. ಈ ಮೂಲಕ 50 ಫಿಫ್ಟಿ ಸಿಡಿಸಿರುವ ಶಿಖರ್‌ ಧವನ್‌ರನ್ನು ಹಿಂದಿಕ್ಕಿ, ಅತಿ ಹೆಚ್ಚು ಅರ್ಧಶತಕ ಬಾರಿಸಿದ ಭಾರತೀಯರಲ್ಲಿ ಅಗ್ರಸ್ಥಾನಕ್ಕೇರಿದರು. 61 ಅರ್ಧಶತಕ ಬಾರಿಸಿರುವ ಡೇವಿಡ್‌ ವಾರ್ನರ್‌ ಅಗ್ರಸ್ಥಾನದಲ್ಲಿದ್ದಾರೆ.