ಐಪಿಎಲ್ ವಿರಾಟ್‌ ಕೊಹ್ಲಿಗೆ ಬಿತ್ತು ವೇತನದ ಶೇ.50ರಷ್ಟು ದಂಡ!

| Published : Apr 23 2024, 12:56 AM IST / Updated: Apr 23 2024, 04:54 AM IST

ಐಪಿಎಲ್ ವಿರಾಟ್‌ ಕೊಹ್ಲಿಗೆ ಬಿತ್ತು ವೇತನದ ಶೇ.50ರಷ್ಟು ದಂಡ!
Share this Article
  • FB
  • TW
  • Linkdin
  • Email

ಸಾರಾಂಶ

ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕೆ ನಾಯಕ ಫಾಫ್‌ ಡು ಪ್ಲೆಸಿಗೂ ಕೂಡಾ 12 ಲಕ್ಷ ರು. ದಂಡ. ಪಂಜಾಬ್‌ ನಾಯಕ ಕರ್ರನ್‌ಗೂ ದಂಡ ವಿಧಿಸಲಾಗಿದೆ.

ಕೋಲ್ಕತಾ: ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ನೋಬಾಲ್ ತೀರ್ಪು ವಿಚಾರದಲ್ಲಿ ಅಂಪೈರ್‌ ವಿರುದ್ಧ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದ ಆರ್‌ಸಿಬಿಯ ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಲಾಗಿದೆ. 

ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಐಪಿಎಲ್‌ ಆಡಳಿ ಮಂಡಳಿ, ‘ಕೊಹ್ಲಿ ಅಂಪೈರ್‌ ತೀರ್ಪು ಪ್ರಶ್ನಿಸುವ ಮೂಲಕ ಐಪಿಎಲ್‌ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ದಂಡ ವಿಧಿಸಲಾಗಿದೆ’ ಎಂದಿದೆ. 

ಕೊಹ್ಲಿ ಬ್ಯಾಟಿಂಗ್‌ ವೇಳೆ ಹರ್ಷಿತ್‌ ರಾಣಾ ಸೊಂಟದ ಎತ್ತರಕ್ಕೆ ಚೆಂಡು ಎಸೆದಿದ್ದರು. ಆದರೆ ಹರ್ಷಿತ್‌ಗೆ ಕೊಹ್ಲಿ ಕ್ಯಾಚ್‌ ನೀಡಿದ್ದು, ಅಂಪೈರ್‌ ಔಟ್‌ ಎಂದು ತೀರ್ಪು ನೀಡಿದ್ದರು. 

ಆದರೆ ಚೆಂಡು ಸೊಂಟದ ಮೇಲೆ ಇತ್ತು ಎಂದು ಕೊಹ್ಲಿ ಅಂಪೈರ್‌ ಜೊತೆ ವಾಗ್ವಾದ ನಡೆಸಿದ್ದರು. ಹಾಕ್‌-ಐ ತಂತ್ರಾಂಶ, 3ನೇ ಅಂಪೈರ್‌ ಪರಿಶೀಲನೆಯಲ್ಲೂ ಚೆಂಡು ಸೊಂಟದ ಮೇಲೆ ಇದ್ದುದಾಗಿ ಕಂಡುಬಂದಿದ್ದರಿಂದ ಕೊಹ್ಲಿ ಅಂಪೈರ್‌ ನಿರ್ಧಾರ ಟೀಕಿಸುತ್ತಲೇ ಮೈದಾನ ತೊರೆದಿದ್ದರು.ಡು ಪ್ಲೆಸಿಗೆ ದಂಡ: ಇದೇ ವೇಳೆ ನಿಧಾನಗತಿ ಬೌಲಿಂಗ್‌ಗಾಗಿ ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿಗೆ 12 ಲಕ್ಷ ರು. ದಂಡ ವಿಧಿಸಲಾಗಿದೆ. ಪಂದ್ಯದಲ್ಲಿ ಅಂಪೈರ್‌ ನಿರ್ಧಾರ ಟೀಕಿಸಿದ್ದಕ್ಕೆ ಪಂಜಾಬ್‌ ನಾಯಕ ಸ್ಯಾಮ್‌ ಕರ್ರನ್‌ಗೂ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಲಾಗಿದೆ.