ಕಾನ್ಪುರ: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಬಾಂಗ್ಲಾದೇಶದ ಹಿರಿಯ ಕ್ರಿಕೆಟಿಗ ಶಕೀಬ್ ಅಲ್ ಹಸನ್‌ಗೆ ಭಾರತದ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಉಡುಗೊರೆಯಾಗಿ ನೀಡಿದ್ದಾರೆ. ಮಂಗಳವಾರ 2ನೇ ಟೆಸ್ಟ್ ಬಳಿಕ ಮೈದಾನದಲ್ಲಿದ್ದ ಶಕೀಬ್ ಬಳಿ ತೆರಳಿದ ಕೊಹ್ಲಿ, ತಮ್ಮ ಬ್ಯಾಟ್ ಕೊಟ್ಟು ಭವಿಷ್ಯಕ್ಕೆ ಶುಭಹಾರೈಸಿದ್ದಾರೆ. ಇದರ ಫೋಟೋ, ವಿಡಿಯೋ ಭಾರಿ ವೈರಲ್ ಆಗಿದೆ.ಶಕೀಬ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅಲ್ಲದೆ, ಬಾಂಗ್ಲಾ ಕ್ರಿಕೆಟ್ ಮಂಡಳಿ ತವರಿನಲ್ಲಿ ಫೇರ್‌ವೆಲ್ ಪಂದ್ಯ ಆಯೋಜಿಸದಿದ್ದರೆ, ಭಾರತ ವಿರುದ್ಧದ 2ನೇ ಟೆಸ್ಟ್ ತಮ್ಮ ಕೊನೆಯ ಟೆಸ್ಟ್ ಆಗಲಿದೆ ಎಂದು ಹೇಳಿದ್ದರು. ‘ಕಳೆದ ಟಿ20 ವಿಶ್ವಕಪ್‌ನಲ್ಲಿ ಆಡಿದ್ದು ನನ್ನ ಕೊನೆ ಟಿ20 ಪಂದ್ಯ. ಇದು ನಿವೃತ್ತಿಗೆ ಸೂಕ್ತ ಸಮಯ. ವಿದಾಯದ ಬಗ್ಗೆ ಆಯ್ಕೆ ಸಮಿತಿ ಜೊತೆ ಈಗಾಗಲೇ ಮಾತನಾಡಿದ್ದೇನೆ’ ಎಂದಿದ್ದರು.ಬಾಂಗ್ಲಾದೇಶದ ಮೀರ್ಪುರ ಕ್ರೀಡಾಂಗಣದಲ್ಲಿ ಕೊನೆ ಟೆಸ್ಟ್ ಆಡುವ ಬಯಕೆಯಿದೆ. ಇದಕ್ಕೆ ಬಾಂಗ್ಲಾ ಕ್ರಿಕೆಟ್ ಮಂಡಳಿಯೂ ಒಪ್ಪಿಗೆ ನೀಡಿದೆ. ನನ್ನ ಕೊನೆ ಪಂದ್ಯವನ್ನು ಅಲ್ಲೇ ನಡೆಸಲು ಚಿಂತಿಸುತ್ತಿದ್ದಾರೆ. ಅದು ಸಾಧ್ಯವಾಗದಿದ್ದರೆ ಭಾರತ ವಿರುದ್ಧ ಪಂದ್ಯವೇ ನನ್ನ ಕೊನೆ ಟೆಸ್ಟ್’ ಎಂದು ಶಕೀಬ್ ಹೇಳಿದ್ದರು. ಇನ್ನು, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಕೊನೆ ಏಕದಿನ ಪಂದ್ಯವಾಡಲಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದರು.
ಬಾಂಗ್ಲಾದೇಶ ಶಕೀಬ್‌ಗೆ ಬ್ಯಾಟ್ ಗಿಫ್ಟ್ ನೀಡಿದ ವಿರಾಟ್: ಕಿಂಗ್ ನಡೆಗೆ ವ್ಯಾಪಕ ಮೆಚ್ಚುಗೆ
ಮೈದಾನದಲ್ಲಿದ್ದ ಶಕೀಬ್ ಬಳಿ ತೆರಳಿದ ಕೊಹ್ಲಿ, ತಮ್ಮ ಬ್ಯಾಟ್ ಕೊಟ್ಟು ಭವಿಷ್ಯಕ್ಕೆ ಶುಭಹಾರೈಸಿದ್ದಾರೆ. ಇದರ ಫೋಟೋ, ವಿಡಿಯೋ ಭಾರಿ ವೈರಲ್ ಆಗಿದೆ.
Latest Videos
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.