ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ ಪ್ಯಾರಿಸ್‌ನಲ್ಲಿ ಆಸ್ಟ್ರೇಲಿಯಾ ಮಹಿಳೆಯ ಮೇಲೆ ಐವರು ಸಾಮೂಹಿಕ ಅತ್ಯಾಚಾರಗೈದಿರುವ ಭೀಕರ ಘಟನೆ ವರದಿಯಾಗಿದೆ.ಫ್ರಾನ್ಸ್ ಮಾಧ್ಯಮ ವರದಿಗಳ ಪ್ರಕಾರ, 25 ವರ್ಷದ ಮಹಿಳೆ ಶುಕ್ರವಾರ ರಾತ್ರಿ ಬಾರ್ ಮತ್ತು ಕ್ಲಬ್‌ಗಳಲ್ಲಿ ಕಾಲ ಕಳೆದಿದ್ದಾರೆ. ಬಳಿಕ ಆಕೆಯನ್ನು ಕರೆದೊಯ್ದ ಐವರು ದುಷ್ಕರ್ಮಿಗಳು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಶನಿವಾರ ಬೆಳಗ್ಗೆ ಹರಿದ ಬಟ್ಟೆಯೊಂದಿಗೆ ಪ್ಯಾರಿಸ್‌ನ ಪಿಗೆಲ್ಲೆ ಎಂಬಲ್ಲಿರುವ ರೆಸ್ಟೋರೆಂಟ್ ಬಳಿ ಬಂದ ಮಹಿಳೆ ಅಲ್ಲಿನ ಸಿಬ್ಬಂದಿ, ಗ್ರಾಹಕರ ಜೊತೆ ಸಹಾಯಕ್ಕೆ ಅಂಗಲಾಚಿದ್ದಾರೆ. ಮಹಿಳೆ ಸ್ಥಿತಿಯನ್ನು ಗಮನಿಸಿದ ರೆಸ್ಟೋರೆಂಟ್ ಮಾಲಿಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ರೆಸ್ಟೋರೆಂಟ್‌ಗೆ ಆಗಮಿಸಿ ಅಂಗಲಾಚುವ, ಆರೋಪಿಯೋರ್ವ ಆಕೆಯನ್ನು ಹಿಂಬಾಲಿಸುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.ವಿಶ್ವ ನಂಬರ್ 1 ಟೆನಿಸಿಗ ಸಿನ್ನರ್ ಒಲಿಂಪಿಕ್ಸ್‌ಗೆ ಇಲ್ಲ
ಪ್ಯಾರಿಸ್: ಹಾಲಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಚಾಂಪಿಯನ್, ವಿಶ್ವ ನಂಬರ್ 1 ಟೆನಿಸಿಗ ಯಾನಿಕ್ ಸಿನ್ನರ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದಾರೆ. ಇಟಲಿಯ 22 ವರ್ಷ ಸಿನ್ನರ್ ಬಾಯಿಯ ಗಾಯಕ್ಕೆ ತುತ್ತಾಗಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ಒಲಿಂಪಿಕ್ಸ್ ಆಡದಿರಲು ನಿರ್ಧರಿಸಿದ್ದಾರೆ.