ವನಿತಾ ಹಾಕಿ: ಭಾರತದ ಒಲಿಂಪಿಕ್ಸ್‌ ಕನಸು ಭಗ್ನ!

| Published : Jan 20 2024, 02:01 AM IST

ವನಿತಾ ಹಾಕಿ: ಭಾರತದ ಒಲಿಂಪಿಕ್ಸ್‌ ಕನಸು ಭಗ್ನ!
Share this Article
  • FB
  • TW
  • Linkdin
  • Email

ಸಾರಾಂಶ

2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಭಾರತ ವನಿತೆರ ತಂಡ ವಿಫಲವಾಗಿದೆ. ಅರ್ಹತಾ ಟೂರ್ನಿಯಲ್ಲಿ ಜಪಾನ್‌ ವಿರುದ್ಧ ಸೋಲನುಭವಿಸಿದ್ದು, ಅಗ್ರ-3ರಲ್ಲಿ ಸ್ಥಾನ ಗಳಿಸುವಲ್ಲಿ ವಿಫಲವಾಗಿದೆ

ರಾಂಚಿ: ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ 4ನೇ ಸ್ಥಾನ ಪಡೆದಿದ್ದ ಭಾರತ ಮಹಿಳಾ ಹಾಕಿ ತಂಡ, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ವಿಫಲವಾಗಿದೆ. ಶುಕ್ರವಾರ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯ 3-4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಪಾನ್‌ ವಿರುದ್ಧ 0-1 ಗೋಲುಗಳಿಂದ ಸೋಲುವುದರೊಂದಿಗೆ ಒಲಿಂಪಿಕ್ಸ್ ಕನಸು ಭಗ್ನಗೊಂಡಿತು. ಒಲಿಂಪಿಕ್ಸ್‌ ಟಿಕೆಟ್‌ ಸಿಗಬೇಕಿದ್ದರೆ ಟೂರ್ನಿಯಲ್ಲಿ ಅಗ್ರ-3 ಸ್ಥಾನ ಪಡೆಯಬೇಕಿತ್ತು.ಪಂದ್ಯದ 6ನೇ ನಿಮಿಷದಲ್ಲೇ ಕಾನ ಉರಾಟ ಪೆನಾಲ್ಟಿ ಕಾರ್ನರ್ ಮೂಲಕ ಬಾರಿಸಿದ ಗೋಲು ಜಪಾನ್‌ ಗೆಲುವನ್ನು ಖಚಿತಪಡಿಸಿತು. ಆ ಬಳಿಕ ಭಾರತ ತೀವ್ರ ಪೈಪೋಟಿ ನೀಡಿದರೂ ಹೊರತಾಗಿಯೂ ಯಾವುದೇ ಗೋಲು ಬಾರಿಸಲಾಗಲಿಲ್ಲ. ಒಟ್ಟು 9 ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನೂ ಪಡೆದರೂ, ಭಾರತ ಬಳಸಿಕೊಳ್ಳಲಿಲ್ಲ. ಸೋಲಿನ ಆಘಾತಕ್ಕೊಳಗಾದ ಭಾರತದ ಆಟಗಾರ್ತಿಯರು ಕಣ್ಣೀರಿಡುತ್ತಲೇ ಮೈದಾನದಿಂದ ಹೊರನಡೆದರು.