ಮಹಿಳಾ ಹಾಕಿ: ಸೆಮಿ ಫೈನಲ್‌ನಲ್ಲಿ ಇಂದು ಭಾರತ vs ಜರ್ಮನಿ

| Published : Jan 18 2024, 02:00 AM IST

ಸಾರಾಂಶ

ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಪಡೆಯುವುದರ ಮೇಲೆ ಕಣ್ಣಿಟ್ಟಿರುವ ಭಾರತ ಮಹಿಳಾ ಹಾಕಿ ತಂಡ, ಗುರುವಾರ ಅರ್ಹತಾ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲಿಷ್ಠ ಜರ್ಮನಿ ತಂಡದ ವಿರುದ್ಧ ಸೆಣಸಾಡಲಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಪಡೆಯುವುದರ ಮೇಲೆ ಕಣ್ಣಿಟ್ಟಿರುವ ಭಾರತ ಮಹಿಳಾ ಹಾಕಿ ತಂಡ, ಗುರುವಾರ ಅರ್ಹತಾ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲಿಷ್ಠ ಜರ್ಮನಿ ತಂಡದ ವಿರುದ್ಧ ಸೆಣಸಾಡಲಿದೆ.

ರಾಂಚಿ: ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಪಡೆಯುವುದರ ಮೇಲೆ ಕಣ್ಣಿಟ್ಟಿರುವ ಭಾರತ ಮಹಿಳಾ ಹಾಕಿ ತಂಡ, ಗುರುವಾರ ಅರ್ಹತಾ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲಿಷ್ಠ ಜರ್ಮನಿ ತಂಡದ ವಿರುದ್ಧ ಸೆಣಸಾಡಲಿದೆ. ಗೆದ್ದು ಫೈನಲ್‌ಗೇರಿದರೆ ಭಾರತಕ್ಕೆ ಒಲಿಂಪಿಕ್ಸ್‌ ಟಿಕೆಟ್‌ ಖಚಿತವಾಗಲಿದ್ದು, ಸೋತರೆ 3ನೇ ಸ್ಥಾನಕ್ಕಾಗಿ ಹೋರಾಡಬೇಕಿದೆ. ಟೂರ್ನಿಯಲ್ಲಿ ಅಗ್ರ-3 ತಂಡಗಳು ಒಲಿಂಪಿಕ್ಸ್‌ ಪ್ರವೇಶಿಸಲಿವೆ.ಆತಿಥೇಯ ಭಾರತ ಟೂರ್ನಿಯಲ್ಲಿ ‘ಬಿ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತಿದ್ದರೂ. ಬಳಿಕ ನ್ಯೂಜಿಲೆಂಡ್‌ ಹಾಗೂ ಇಟಲಿಯನ್ನು ಸೋಲಿಸಿ ನಾಕೌಟ್‌ಗೇರಿದೆ. ಅತ್ತ ಜರ್ಮನಿ ತಂಡ ‘ಎ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 1ರಲ್ಲಿ ಡ್ರಾ ಸಾಧಿಸಿ ಅಗ್ರಸ್ಥಾನಿಯಾಗಿಯೇ ಸೆಮೀಸ್‌ಗೇರಿದೆ. ಗುರುವಾರದ ಮತ್ತೊಂದು ಸೆಮೀಸ್‌ನಲ್ಲಿ ಜಪಾನ್‌-ಅಮೆರಿಕ ಮುಖಾಮುಖಿಯಾಗಲಿವೆ.ಪಂದ್ಯ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ