ವಿಶ್ವ ರ್‍ಯಾಂಕಿಂಗ್‌: 136 ಸ್ಥಾನ ಜಿಗಿದ ಭಾರತದ ಯುವ ಶಟ್ಲರ್‌ ಅನ್ಮೋಲ್

| Published : Feb 21 2024, 02:05 AM IST

ವಿಶ್ವ ರ್‍ಯಾಂಕಿಂಗ್‌: 136 ಸ್ಥಾನ ಜಿಗಿದ ಭಾರತದ ಯುವ ಶಟ್ಲರ್‌ ಅನ್ಮೋಲ್
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡ್ಮಿಂಟನ್‌ ಏಷ್ಯಾ ಟೀಂ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ತಮ್ಮ ಆಟದ ಮೂಲಕ ಬ್ಯಾಡ್ಮಿಂಟನ್‌ ಜಗತ್ತನ್ನು ನಿಬ್ಬೆರಗಾಗಿಸಿದ್ದ 17 ವರ್ಷದ ಅನ್ಮೋಲ್‌ ಖರ್ಬ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಬರೋಬ್ಬರಿ 136 ಸ್ಥಾನ ಮೇಲಕ್ಕೇರಿದ್ದಾರೆ.

ನವದೆಹಲಿ: ಬ್ಯಾಡ್ಮಿಂಟನ್‌ ಏಷ್ಯಾ ಟೀಂ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ತಮ್ಮ ಆಟದ ಮೂಲಕ ಬ್ಯಾಡ್ಮಿಂಟನ್‌ ಜಗತ್ತನ್ನು ನಿಬ್ಬೆರಗಾಗಿಸಿದ್ದ 17 ವರ್ಷದ ಅನ್ಮೋಲ್‌ ಖರ್ಬ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಬರೋಬ್ಬರಿ 136 ಸ್ಥಾನ ಮೇಲಕ್ಕೇರಿದ್ದಾರೆ. ಮಂಗಳವಾರ ಪ್ರಕಟಗೊಂಡ ಮಹಿಳಾ ಸಿಂಗಲ್ಸ್‌ನ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅನ್ಮೋಲ್‌ 336ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಪಿ.ವಿ.ಸಿಂಧು 11ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್‌ 7ನೇ ಸ್ಥಾನದಲ್ಲಿ ಮುಂದುವರಿದಿದ್ದು, ಲಕ್ಷ್ಯ ಸೇನ್‌ 19, ಕಿದಂಬಿ ಶ್ರೀಕಾಂತ್‌ 24ನೇ ಸ್ಥಾನಗಳಲ್ಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.