ಡ್ರ್ಯಾಗನ್‌ ಬಾಲ್‌ ಸೃಷ್ಟಿಕರ್ತಅಕಿರ ಟೋರಿಯಾಮಾ ನಿಧನ

| Published : Mar 09 2024, 01:33 AM IST

ಸಾರಾಂಶ

ಜಪಾನಿ ಚಿತ್ರ ವಿನ್ಯಾಸಕಾರ ಅಕಿರ ಟೋರಿಯಾಮಾ (68) ತಮ್ಮ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಮಾ.1ರಂದು ನಿಧನರಾಗಿದ್ದಾರೆ ಎಂದು ಬರ್ಡ್‌ ಸ್ಟುಡಿಯೋಸ್‌ ತಿಳಿಸಿದೆ.

ಟೊಕ್ಯೊ: ಡ್ರ್ಯಾಗನ್‌ ಬಾಲ್‌ ಮಂಗ ಸರಣಿಯ ಮೂಲಕ ಖ್ಯಾತಿ ಗಳಿಸಿದ್ದ ಜನಪ್ರಿಯ ಜಪಾನಿ ಚಿತ್ರ ವಿನ್ಯಾಸಕಾರ ಅಕಿರ ಟೋರಿಯಾಮಾ (68) ತಮ್ಮ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಮಾ.1ರಂದು ನಿಧನರಾಗಿದ್ದಾರೆ ಎಂದು ಬರ್ಡ್‌ ಸ್ಟುಡಿಯೋಸ್‌ ತಿಳಿಸಿದೆ. ಅಕಿರ ತಮ್ಮ ಮಂಗ ಸರಣಿಯನ್ನು 1978ರಲ್ಲಿ ಹಾಸ್ಯ ಕಾಮಿಕ್‌ ವಂಡರ್‌ ಐಲ್ಯಾಂಡ್‌ ಮೂಲಕ ಆರಂಭಿಸಿದರು. ಬಳಿಕ ಡಾ. ಸ್ಲಂಪ್‌ ಸರಣಿ ಅವರ ಖ್ಯಾತಿಯನ್ನು ಹೆಚ್ಚಿಸಿತ್ತು. ಅವರು ವಿನ್ಯಾಸಗೊಳಿಸಿದ ಡ್ರ್ಯಾಗನ್‌ ಬಾಲ್‌ ಸೇರಿದಂತೆ ಬಹುಪಾಲು ಕಾರ್ಟೂನ್‌ ಚಿತ್ರಗಳನ್ನು ಮುಂದೆ ಹಲವು ಆ್ಯನಿಮೇಟೆಡ್‌ ಚಿತ್ರ ಮತ್ತು ವಿಡಿಯೋ ಗೇಮ್‌ಗಳಲ್ಲೂ ಬಳಸಿಕೊಳ್ಳಲಾಗಿದೆ.