ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 10 ವರ್ಷಗಳ ಆಡಳಿತದ ಅವಧಿಯಲ್ಲಿ 120 ಕೋಟಿಗೂ ಹೆಚ್ಚು ಭಾರತೀಯರು ಡಿಜಿಟಲ್ ಗುರುತು ಪಡೆದುಕೊಂಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 10 ವರ್ಷಗಳ ಆಡಳಿತದ ಅವಧಿಯಲ್ಲಿ 120 ಕೋಟಿಗೂ ಹೆಚ್ಚು ಭಾರತೀಯರು ಡಿಜಿಟಲ್ ಗುರುತು ಪಡೆದುಕೊಂಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಲಂಡನ್‌ನಲ್ಲಿ ಆಯೋಜಿತ ‘ಬದಲಾಗುತ್ತಿರುವ ವಿಶ್ವದಲ್ಲಿ ಬ್ರಿಟನ್ ಭವಿಷ್ಯ’ ಎನ್ನುವ ಜಾಗತಿಕ ಮಟ್ಟದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರಾಜೀವ್, ಭಾರತವು ಡಿಜಿಟಲ್ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ಸಾಧಿಸಿದ ಕ್ಷಿಪ್ರ ಸಾಧನೆ ಮತ್ತು ಮುಂದಿನ ಗುರಿಗಳ ಬಗ್ಗೆ ಬಿಚ್ಚಿಟ್ಟಿದ್ದಾರೆ.‘ಡಿಜಿಟಲೀಕರಣ ದೇಶಕ್ಕೆ ತಳಪಾಯವಿದ್ದಂತೆ. ಭಾರತದಲ್ಲಿ ಸದ್ಯ 120 ಕೋಟಿಗೂ ಅಧಿಕ ಭಾರತೀಯರು ಡಿಜಿಟಲ್ ಗುರುತು ಹೊಂದಿದ್ದಾರೆ. 2014ಕ್ಕೂ ಮುನ್ನ ಪ್ರಜಾಪಭುತ್ವದ ಸೌಲಭ್ಯಗಳು ಜನರಿಗೆ ನೇರವಾಗಿ ತಲುಪುತ್ತಿಲ್ಲ ಎನ್ನುವ ಮಾತು ಪದೇ ಪದೇ ಕೇಳಿ ಬರುತ್ತಿತ್ತು. ಆದರೆ ಡಿಜಿಟಲೀಕರಣ ಮೂಲಕ ಅದೆಲ್ಲವೂ ಬದಲಾಗಿದೆ’ ಎಂದರು.
‘ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿನ ವರ್ಷಗಳಲ್ಲಿ ಪರಿವರ್ತನೆಯ ಹೊಸ ಗಾಳಿ ಬರಲಿದೆ. ಜಾಗತಿಕ ವ್ಯಾಪಾರ, ಒಪ್ಪಂದಗಳಲ್ಲಿಯೂ ಇದು ಬಹುದೊಡ್ಡ ಪಾತ್ರವನ್ನೇ ವಹಿಸಲಿದೆ’ ಎಂದರು.ರಾಜೀವ್ ಬಗ್ಗೆ ಮೆಚ್ಚುಗೆ: ಇದೇ ವೇಳೆ ರಾಜೀವ್ ಚಂದ್ರಶೇಖರ್ ಅವರನ್ನು ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಹಾಡಿ ಹೊಗಳಿದರು. ಭಾರತದಲ್ಲಿ ಡಿಟಜಿಲೀಕರಣದ ಸಾಕ್ಷರತೆ ಹೆಚ್ಚಿಸುವಲ್ಲಿ ರಾಜೀವ್ ಚಂದ್ರಶೇಖರ್ ಬದ್ಧತೆ ಮತ್ತು ಅವರು ಕೈಗೊಂಡ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.