ಸಾರಾಂಶ
ಜೆರುಸಲೇಂ: ಇಸ್ಲಾಂ ಧರ್ಮದ ಪವಿತ್ರ ಹಜ್ ಯಾತ್ರೆ ವೇಳೆ ಮೆಕ್ಕಾದಲ್ಲಿ ತಾಪಮಾನ 51.8 ಡಿಗ್ರಿ ದಾಖಲಾಗಿದೆ. ಹೀಗಾಗಿ ಬಿಸಿಲಿನ ತಾಪ ತಾಳದೇ 577 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 2000 ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.
ಮೆಕ್ಕಾದಲ್ಲಿ ಬುಧವಾರ 51.8 ಡಿಗ್ರಿ ತಾಪಮಾನ ದಾಖಲಾಗಿತ್ತು. ಅನಿವಾರ್ಯವಾಗಿ ಬಹುತೇಕ ಯಾತ್ರಿಗಳು ಬಹುಕಾಲ ಹೊರಾಂಗಣದಲ್ಲೇ ನಿಂತು ತಮ್ಮ ವಿಧಿವಿಧಾನ ಪೂರೈಸಿದರು. ಇದು ಅಸ್ವಾಸ್ಥ್ಯಕ್ಕೆ ನಾಂದಿ ಹಾಡಿತು.
ಮೃತರಲ್ಲಿ ಈಜಿಪ್ಷಿಯನ್ನರೇ (323) ಹೆಚ್ಚಿದ್ದು, ನಂತರದ ಸ್ಥಾನದಲ್ಲಿ ಜೋರ್ಡಾನ್ (60) ಯಾತ್ರಿಕರಿದ್ದಾರೆ. ನೋಂದಣಿ ಮಾಡಿಕೊಳ್ಳದೆ ಹಜ್ ಯಾತ್ರೆಗೆ ಬರುವವರಿಗೆ ಸೂಕ್ತ ಹವಾನಿಯಂತ್ರಿತ ಸೌಲಭ್ಯ ಇಲ್ಲವೇ ಸೂರು ಸಿಗದ ಕಾರಣ ಸಾವಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಕಳೆದ ವರ್ಷವೂ ಸಹ ಹಜ್ ಯಾತ್ರೆಯ ವೇಳೆ 240ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.
ಮರಣ ಹೇಗೆ? ನೋಂದಣಿ ಮಾಡಿಕೊಳ್ಳದೆ ಹಜ್ ಯಾತ್ರೆಗೆ ಬರುವವರಿಗೆ ಸೂಕ್ತ ಹವಾನಿಯಂತ್ರಿತ ಸೌಲಭ್ಯ ಇಲ್ಲವೇ ಸೂರು ಸಿಗದ ಕಾರಣ ಸಾವಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.