ನೋಯ್ಡಾದಲ್ಲಿ ಉಬರ್ ಆಟೋ ಬುಕ್ ಮಾಡಿದ ವ್ಯಕ್ತಿಯೊಬ್ಬರಿಗೆ 62 ರು. ಬದಲಾಗಿ ಭರ್ಜರಿ 7.66 ಕೋಟಿ ರು. ಬಿಲ್ ನೀಡಿದ ಘಟನೆ ನಡೆದಿದೆ.
ನವದೆಹಲಿ: ನೋಯ್ಡಾದಲ್ಲಿ ಉಬರ್ ಆಟೋ ಬುಕ್ ಮಾಡಿದ ವ್ಯಕ್ತಿಯೊಬ್ಬರಿಗೆ 62 ರು. ಬದಲಾಗಿ ಭರ್ಜರಿ 7.66 ಕೋಟಿ ರು. ಬಿಲ್ ನೀಡಿದ ಘಟನೆ ನಡೆದಿದೆ.
ದೀಪಕ್ ಎಂಬುವವರುಟೆಂಗುರಿಯಾ ಅವರಿಗೆ ಈ ರೀತಿಯ ಅನುಭವವಾಗಿದೆ. ಉಬರ್ ಆಟೋ ಏರಿ ತಾವು ತಲುಪಬೇಕಾದ ಸ್ಥಳಕ್ಕೆ ತಲುಪಿದ ಬಳಿಕ ಅವರಿಗೆ ನಿರೀಕ್ಷಿತ 62 ರು. ಬದಲು 7.66 ಕೋಟಿ ರು.ಬಿಲ್ ಮೊತ್ತ ರವಾನೆಯಾಗಿದೆ.
ಅದರಲ್ಲಿ ಚಾಲನಾ ಶುಲ್ಕ ₹1,67,74,647, ಕಾಯುವಿಕೆ ಶುಲ್ಕ ₹5,99,09,189 ಎಂದು ತೋರಿಸಲಾಗಿದೆ. ಜೊತೆಗೆ ₹75 ಡಿಸ್ಕೌಂಟ್ ಕೂಡ ನೀಡಲಾಗಿದೆ. ಈ ಬಗ್ಗೆ ಅವರು ದೂರು ನೀಡಿದ ಬಳಿಕ ಘಟನೆ ಕುರಿತು ಕ್ಷಮೆಯಾಚಿಸಿರುವ ಕಂಪನಿ ತಾಂತ್ರಿಕ ದೋಷವನ್ನು ಸರಿಪಡಿಸುವುದಾಗಿ ಸ್ಪಷ್ಟನೆ ನೀಡಿದೆ.
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.