ಸಾರಾಂಶ
ಕೈದಿಗಳ ಹಸ್ತಾಂತರಕ್ಕಾಗಿ ಉಕ್ರೇನ್‌ಗೆ ತೆರಳುತ್ತಿದ್ದ ರಷ್ಯಾ ವಿಮಾನ ಪತನಗೊಂಡು 74 ಮಂದಿ ಸಾವನ್ನಪ್ಪಿದ್ದಾರೆ.
ಮಾಸ್ಕೋ: 65 ಉಕ್ರೇನ್ ಯುದ್ಧ ಕೈದಿಗಳನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಸೇನಾ ವಿಮಾನವೊಂದು ಬುಧವಾರ ಅಪಘಾತಕ್ಕೆ ತುತ್ತಾಗಿದೆ. ಈ ಘಟನೆಯಲ್ಲಿ 65 ಕೈದಿಗಳು ಸೇರಿ 74 ಮಂದಿ ಸಾವನ್ನಪ್ಪಿದ್ದಾರೆ.
ರಷ್ಯಾ ಉಕ್ರೇನ್ ಗಡಿ ಭಾಗ ಬೆಲ್ಗೊರೋಡ್‌ನಲ್ಲಿ ಈ ಘಟನೆ ನಡೆದಿದ್ದು, ಹಸ್ತಾಂತರಕ್ಕಾಗಿ ಈ ಕೈದಿಗಳನ್ನು ಉಕ್ರೇನ್‌ಗೆ ಕರೆದೊಯ್ಯಲಾಗುತ್ತಿತ್ತು ಎಂದು ರಷ್ಯಾ ಹೇಳಿದೆ.ಬೆಲ್ಗೋರೋಡ್ ಬಳಿ ವಿಮಾನ ಪತನಗೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಮಾನ ಬಿದ್ದ ಸ್ಥಳದಲ್ಲಿ ದೊಡ್ಡದಾಗಿ ಬೆಂಕಿ ಕಾಣಿಸಿಕೊಂಡಿದೆ.
ಈ ವಿಮಾನದಲ್ಲಿ 65 ಮಂದಿ ಯುದ್ಧಕೈದಿಗಳು, 6 ಮಂದಿ ಸಿಬ್ಬಂದಿ ಮತ್ತು 3 ಮಂದಿ ರಕ್ಷಣಾ ಸಿಬ್ಬಂದಿ ಇದ್ದರು ಎಂದು ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ.
ಉಕ್ರೇನ್ ದಾಳಿಗೆ ವಿಮಾನ ಪತನ: ಗಡಿ ಭಾಗದಲ್ಲಿ ಹಾರಾಡುತ್ತಿದ್ದ ವಿಮಾನದ ಮೇಲೆ ಉಕ್ರೇನ್ ಸೇನಾಪಡೆಗಳು ಕ್ಷಿಪಣಿ ಮೂಲಕ ದಾಳಿ ನಡೆಸಿವೆ. ಹೀಗಾಗಿ ವಿಮಾನ ಪತನಗೊಂಡಿದೆ ಎಂದು ರಷ್ಯಾದ ಸಂಸದರು ಆರೋಪಿಸಿದ್ದಾರೆ.