ಸೌದಿ ರಾಜಕುಮಾರನ ಜೊತೆ80 ಹದ್ದುಗಳ ವಿಮಾನಯಾನ!

| Published : Dec 16 2023, 02:00 AM IST

ಸಾರಾಂಶ

ಸೌದಿ ರಾಜಕುಮಾರನ ಜೊತೆ ಹದ್ದುಗಳೂ ವಿಮಾನಯಾನ ಮಾಡುತ್ತಿವೆ.

ಸೌದಿ ಅರೇಬಿಯಾ ರಾಜಕುಮಾರ ಈ ರೀತಿಯ ಪ್ರಯಾಣ ಮಾಡಿದ್ದನಂತೆ. ಆತನ ತನ್ನ ಜೊತೆ 80 ಫಾಲ್ಕನ್‌ಗಳನ್ನು (ಹದ್ದು) ಸುರಕ್ಷಿತವಾಗಿ ಹಾಗೂ ಸುಖಕರವಾಗಿ ಬೇರೆ ಕಡೆಗೆ ಕರೆದೊಯ್ಯಲು ಪ್ರತ್ಯೇಕ ವಿಮಾನವನ್ನು ಬುಕ್‌ ಮಾಡಿದ್ದನ್ನಂತೆ. ಅದೇಕೆ 80 ಹದ್ದುಗಳು ಎಂದರೆ, ಅರಬ್‌ ರಾಷ್ಟ್ರಗಳಲ್ಲಿ ಹದ್ದುಗಳನ್ನು ವಿಭಿನ್ನ ಕ್ರೀಡೆಯಲ್ಲಿ ತೊಡಗಿಸಲು ಬಳಸಲಾಗುತ್ತದೆ. ಅವುಗಳಿಗೆ ಪಾಸ್ಪೋರ್ಟ್‌ ಸಹ ಇದೆಯಂತೆ. ಇದರಿಂದಾಗಿ ಅವುಗಳನ್ನು ಯಾವ ದೇಶಕ್ಕಾದರೂ ತನ್ ಮಾಲೀಕನ ಜೊತೆ ತೆಗೆದುಕೊಂಡು ಹೋಗಬಹುದಂತೆ. ಅದೇ ರೀತಿ ಇಲ್ಲೂ ಕೂಡ ಆಗಿದ್ದು, ಅರಬ್‌ ರಾಷ್ಟ್ರಗಳಲ್ಲಿ ಇದೇನು ಹೊಸದೇನಲ್ಲವಂತೆ.ಫೋಟೋ: ತಮಾಷೆಯಲ್ಲ 2