ಈಕೆಗೆ ಶವಪೆಟ್ಟಿಗೆಯಲ್ಲಿ ಮಲಗೋ ಆಸೆ!
KannadaprabhaNewsNetwork | Published : Oct 30 2023, 12:30 AM IST / Updated: Oct 30 2023, 12:31 AM IST
ಈಕೆಗೆ ಶವಪೆಟ್ಟಿಗೆಯಲ್ಲಿ ಮಲಗೋ ಆಸೆ!
ಸಾರಾಂಶ
ಅಮೆರಿಕದ ಮಹಿಳೆ ದಿನಂಪ್ರತಿ ಶವಪೆಟ್ಟಿಗೆಯಲ್ಲಿ ಮಲಗುತ್ತಾರಂತೆ.
ಜನರಿಗೆ ಕಿಂಗ್ ಸೈಜ್ ಬೆಡ್‌ರೂಂ ಮಾಡಿ ಅದರಲ್ಲಿ ಏಸಿ ಹಾಕಿಕೊಂಡು ರಾಜನಂತೆ ಮಲಗಬೇಕೆಂದು ಆಸೆ ಇರುತ್ತದೆ. ಆದರೆ ಅಮೆರಿಕದ ಮಹಿಳೆ ದಿನಂಪ್ರತಿ ಶವಪೆಟ್ಟಿಗೆಯಲ್ಲಿ ಮಲಗುತ್ತಾರಂತೆ. ಅದು ಏಕೆ ಅಂದರೆ, ಆಕೆಗೆ ಅದರಲ್ಲಿ ಮಲಗಿದರೆ ಜೀವನದ ಕಷ್ಟಗಳನ್ನು ಮರೆಸಿ ಒಳ್ಳೆ ನಿದ್ರೆ ಬರುತ್ತದಂತೆ. ಜೊತೆಗೆ ಇದರಲ್ಲಿ ಯಾವುದೇ ರೀತಿಯ ನೋವುಗಳು ಆಗದೇ ಸುಖಕರ ನಿದ್ರೆ ಆಗುತ್ತದೆ ಎಂದು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾಳೆ. ಇದನ್ನು ಕಂಡ ಜನರು ‘ಈ ಯಮ್ಮಂಗೆ ಏನಾದರೂ ತಲೆ ಕೆಟ್ಟಿದೆಯಾ ? ಹೋಗ್ ಹೋಗಿ ಶವಪೆಟ್ಟಿಗೆಯಲ್ಲಿ ಮಲ್ಕೋತಿನಿ ಅಂತಾಳಲ್ಲ’ ಎಂದು ಕಮೆಂಟ್ ಮಳೆಗರೆದಿದ್ದಾರೆ.