ಸಾರಾಂಶ
ಖ್ಯಾತ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್‌ಗೆ ಹೃದಯಾಘಾತ ಸಂಭವಿಸಿದೆ.. ಸದ್ಯಕ್ಕೆ ಆಕೆಯ ಪರಿಸ್ಥಿತಿ ವಿಷಮವಾಗಿದ್ದು, ಕೋಮಾದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ವಾಷಿಂಗ್ಟನ್: ಖ್ಯಾತ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್‌ಗೆ ಹೃದಯಾಘಾತ ಸಂಭವಿಸಿದೆ.. ಸದ್ಯಕ್ಕೆ ಆಕೆಯ ಪರಿಸ್ಥಿತಿ ವಿಷಮವಾಗಿದ್ದು, ಕೋಮಾದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರವಷ್ಟೇ ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್ ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಅಷ್ಟರಲ್ಲೇ ಎಮಿಲಿ ಅಸ್ವಸ್ಥರಾಗಿರುವ ವಿಷಯ ಗೊತ್ತಾಗಿದೆ.ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ನೀಲಿ ಚಿತ್ರಗಳ ತಾರೆ ಎಮಿಲಿ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ವಿಪರೀತ ಮಾದಕ ವಸ್ತುಗಳ ಸೇವನೆಯಿಂದ ಹೃದಯಾಘಾತ ಸಂಭವಿಸಿದೆ. ಆಕೆ ಈಗ ಕೋಮಾಕ್ಕೆ ಜಾರಿದ್ದಾರೆ. ಸದ್ಯಕ್ಕೆ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿರುವ ವಿಲ್ಲಿಸ್‌ನ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ.