ಸಾರಾಂಶ
ಕೃತಕ ಬುದ್ಧಿಮತ್ತೆಯು ಊಹೆಗೂ ಮೀರಿ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಸೊಳ್ಳೆಗಳ ಮೇಲೆ ಕಣ್ಣಿಡಲು ಮತ್ತು ಅವುಗಳನ್ನು ನಿಯಂತ್ರಿಸಲು ಎಐ ಬಳಸಲು ಆಂಧ್ರಪ್ರದೇಶ ಮುಂದಾಗಿದೆ.
ಅಮರಾವತಿ: ಕೃತಕ ಬುದ್ಧಿಮತ್ತೆಯು ಊಹೆಗೂ ಮೀರಿ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಸೊಳ್ಳೆಗಳ ಮೇಲೆ ಕಣ್ಣಿಡಲು ಮತ್ತು ಅವುಗಳನ್ನು ನಿಯಂತ್ರಿಸಲು ಎಐ ಬಳಸಲು ಆಂಧ್ರಪ್ರದೇಶ ಮುಂದಾಗಿದೆ.
ಈ ಬಗ್ಗೆ ಟಿಡಿಪಿ ಪ್ರಕಟಣೆ ಹೊರಡಿಸಿದ್ದು, ‘ಸೊಳ್ಳೆಗಳ ಪ್ರಭೇದ, ಲಿಂಗ ಮತ್ತು ಸಾಂದ್ರತೆಯನ್ನು ಪತ್ತೆಹಚ್ಚಲು ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯು ಎಐ ಚಾಲಿತ ಸೆನ್ಸಾರ್ ಮತ್ತು ಡ್ರೋನ್‌ಗಳನ್ನು ನಿಯೋಜಿಸಲಿದೆ. ಇವುಗಳನ್ನು 6 ಮಹಾನಗರ ಪಾಲಿಕೆಗಳ 66 ಸ್ಥಳಗಳಲ್ಲಿ ನಿಯೋಜಿಸಲಾಗುವುದು’ ಎಂದು ತಿಳಿಸಲಾಗಿದೆ.
ಡ್ರೋನ್‌ಗಳಲ್ಲಿರುವ ಸೆನ್ಸಾರ್‌ಗಳು ಸೊಳ್ಳೆಗಳ ಸಾಂದ್ರತೆ ಮತ್ತು ತಾಪಮಾನದಂತಹ ಹವಾಮಾನ ಪರಿಸ್ಥಿತಿಗಳ ನೈಜಸಮಯದ ಮೇಲ್ವಿಚಾರಣೆಯನ್ನು ನಡೆಸುತ್ತವೆ. ಇದರಿಂದ, ರಾಸಾಯನಿಕವನ್ನು ಸುಮ್ಮನೆ ಎಲ್ಲೆಡೆ ಸಿಂಪಡಿಸುವುದು ತಪ್ಪುತ್ತದೆ. ಅಂತೆಯೇ, ರಾಸಾಯನಿಕ ಸಿಂಪಡಿಸಲು ಡ್ರೋನ್ ಬಳಸುವುದರಿಂದ ಸಮಯ, ರಾಸಾಯನಿಕ ಪ್ರಮಾಣ, ವೆಚ್ಚಗಳು ಇಳಿಕೆಯಾಗುತ್ತವೆ.
ಕೆಲ ತಿಂಗಳುಗಳ ಹಿಂದೆ ಗುಜರಾತ್‌ನ ಸೂರತ್‌ನಲ್ಲೂ ಸೊಳ್ಳೆ ಪತ್ತೆ ಮತ್ತು ನಾಶಕ್ಕೆ ಡ್ರೋನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿತ್ತು.