ಅಮೆರಿಕದಲ್ಲಿ ಭಾರತೀಯ ನೃತ್ಯಗಾರನ ಗುಂಡಿಕ್ಕಿ ಕೊಲೆ

| Published : Mar 03 2024, 01:37 AM IST / Updated: Mar 03 2024, 09:30 AM IST

ಸಾರಾಂಶ

ಭರತನಾಟ್ಯ ನೃತ್ಯ ಅಭ್ಯಾಸ ಮಾಡುತ್ತಿದ್ದ ಅಮರ್‌ನಾಥ್‌ ಘೋಷ್‌ನನ್ನು ಅಮೆರಿಕದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.

ನ್ಯೂಯಾರ್ಕ್‌: ಅಮೆರಿಕದಲ್ಲಿ ಭಾರತೀಯರ ಸಾವಿನ ಸರಣಿ ಮುಂದುವರೆದಿದ್ದು, ವಾಷಿಂಗ್ಟನ್‌ ಯೂನಿವರ್ಸಿಟಿಯಲ್ಲಿ ಭರತನಾಟ್ಯ ಮತ್ತು ಕುಚಿಪುಡಿ ನೃತ್ಯ ಪ್ರಕಾರವನ್ನು ಅಭ್ಯಾಸ ಮಾಡುತ್ತಿದ್ದ ಭಾರತೀಯ (ಪ.ಬಂಗಾಳ) ಮೂಲದ ವಿದ್ಯಾರ್ಥಿ ಅಮರ್‌ನಾಥ್‌ ಘೋಷ್‌ನನ್ನು (34) ದುಷ್ಕರ್ಮಿಗಳು ಮಂಗಳವಾರ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. 

ಮಂಗಳವಾರ ಸಂಜೆ ಎಂದಿನಂತೆ ಮಿಸ್ಸೌರಿಯ ಸೇಂಟ್‌ ಲೂಯಿಸ್‌ನ ನೃತ್ಯ ಅಕಾಡೆಮಿಯಲ್ಲಿ ನೃತ್ಯ ತರಬೇತಿಯನ್ನು ಮುಗಿಸಿಕೊಂಡು ಹೊರಬರುತ್ತಿದ್ದಾಗ ಸಂಜೆ 7:15ರ ವೇಳೆಗೆ ಆತನನ್ನು ಹಲವು ಬಾರಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.

ಕಳೆದ ವರ್ಷವಷ್ಟೇ ಅಮರ್‌ನಾಥ್‌ ನೃತ್ಯ ತರಬೇತಿಗಾಗಿ ಅಮೆರಿಕಕ್ಕೆ ತೆರಳಿದ್ದರು. ಭಾರತೀಯ ರಾಯಭಾರ ಕಚೇರಿ ತನಿಖೆಗೆ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದೆ.