ಸಾರಾಂಶ
ಈ ವರ್ಷ 4 ಬ್ಲೂಫಿಲ್ಮಿಣಿಯರ ಅಕಾಲಿಕ ನಿಧನವಾಗಿದ್ದು, ಕಡೆಯದಾಗಿ ಮಾ.1ರಂದು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಖ್ಯಾತ ನೀಲಿ ಚಿತ್ರತಾರೆ ಸೋಫಿಯಾ ಲಿಯೋನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಖ್ಯಾತ ನೀಲಿ ಚಿತ್ರ ನಟಿ ಸೋಫಿಯಾ ಲಿಯೋನ್ (26) ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಇದು ಅಮೆರಿಕದಲ್ಲಿ ಈ ವರ್ಷ ಉಂಟಾಗುತ್ತಿರುವ ನಾಲ್ಕನೇ ನೀಲಿ ಚಿತ್ರ ನಟಿಯ ಅಕಾಲಿಕ ಸಾವಾಗಿದೆ. ಇದಕ್ಕೂ ಮೊದಲು ಕಾಗ್ನೀ ಲಿನ್ ಕಾರ್ಟರ್, ಜೆಸ್ಸೆ ಜೇನ್ ಹಾಗೂ ಥೈನಾ ಫೀಲ್ಡ್ಸ್ ಸಾವನ್ನಪ್ಪಿದ್ದರು.ಲಿಯೋನ್ 18ನೇ ವಯಸ್ಸಿಗೇ ನೀಲಿ ಚಿತ್ರರಂಗ ಪ್ರವೇಶಿಸಿ ಚಿತ್ರ ರಸಿಕರ ಮನ ಗೆದ್ದಿದ್ದರು.
ಲಿಯೋನ್ ಸಾವಿನ ಬಗ್ಗೆ ಮಾಹಿತಿ ನೀಡಿರುವ ಎಂದು ಅವರ ಸಾಕುತಂದೆ ಮೈಕ್ ರೊಮೆರೋ, ‘ಮಾ.1ರಂದು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸೋಫಿಯಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ’ ಎಂದಿದ್ದಾರೆ. ಈಕೆಯ ಸಾವು ಆತ್ಮಹತ್ಯೆ ಅಲ್ಲದಿದ್ದರೂ ನರಹತ್ಯೆ ನಡೆದಿರಬಹುದೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೋಫಿಯಾ ಸಾವನ್ನು ಅವರು ಕಾರ್ಯನಿರ್ವಹಿಸುತ್ತಿದ್ದ 101 ಮಾಡೆಲಿಂಗ್ ಸಂಸ್ಥೆಯು ಸಹ ದೃಢೀಕರಿಸಿದೆ.