ಪ್ಯಾಲೆಸ್ತೀನ್‌ ವಿಮೋಚನೆಗೆ ಆಗ್ರಹಿಸಿ ಅಮೆರಿಕ ಯೋಧ ಆತ್ಮಾಹುತಿ

| Published : Feb 27 2024, 01:30 AM IST

ಪ್ಯಾಲೆಸ್ತೀನ್‌ ವಿಮೋಚನೆಗೆ ಆಗ್ರಹಿಸಿ ಅಮೆರಿಕ ಯೋಧ ಆತ್ಮಾಹುತಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ಯಾಲೆಸ್ತೀನ್‌ ವಿಮೋಚನೆಗೆ ಆಗ್ರಹಿಸಿ ಅಮೆರಿಕದ ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ವಾಷಿಂಗ್ಟನ್‌ ನಗರದ ಇಸ್ರೇಲ್‌ ದೂತಾವಾಸ ಕಚೇರಿಯ ಮುಂದೆ ಬೆಂಕಿ ಹಚ್ಚಿಕೊಂದು ಸಾವನ್ನಪ್ಪಿದ್ದಾರೆ.

ವಾಷಿಂಗ್ಟನ್‌: ಇಸ್ರೇಲ್‌ ಸೇನೆಯ ಕಪಿಮುಷ್ಟಿಯಲ್ಲಿ ನಲುಗುತ್ತಿರುವ ಪ್ಯಾಲೆಸ್ತೀನನ್ನು ವಿಮೋಚನೆ ಮಾಡುವಂತೆ ಘೋಷಣೆ ಕೂಗುತ್ತಾ ಅಮೆರಿಕ ವಾಯುಸೇನೆಯ ಯೋಧನೊಬ್ಬ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದಂತಹ ಘಟನೆ ನಗರದ ಇಸ್ರೇಲ್‌ ದೂತಾವಾಸ ಕಚೇರಿಯಲ್ಲಿ ನಡೆದಿದೆ. ಇತ್ತಿಚೆಗೆ ಕೆಲವು ಗುಂಪುಗಳು ಅಮೆರಿಕದ ಇಸ್ರೇಲ್‌ ದೂತಾವಾಸ ಕಚೇರಿಯಲ್ಲಿ ಭಾನುವಾರದಂದು ಪ್ಯಾಲೆಸ್ತೀನ್‌ನಲ್ಲಿ ನಾಗರಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸುವಂತೆ ಪ್ರತಿಭಟನೆ ನಡೆಸಿದ್ದರು.

ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಯೋಧ ಮಧ್ಯಾಹ್ನ 1ರ ಸುಮಾರಿಗೆ ತನ್ನ ದೇಹಕ್ಕೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಘೋಷಣೆ ಕೂಗುವ ಮೂಲಕ ಸಜೀವ ದಹನ ಮಾಡಿಕೊಂಡಿದ್ದಾನೆ.