ಮಸ್ಕ್‌ ಹಿಂದಿಕ್ಕಿ ಫ್ರಾನ್ಸ್‌ ಉದ್ಯಮಿ ಅರ್ನಾಲ್ಟ್‌ ವಿಶ್ವದ ನಂ.1 ಶ್ರೀಮಂತ

| Published : Jan 29 2024, 01:39 AM IST / Updated: Jan 29 2024, 06:35 AM IST

ಮಸ್ಕ್‌ ಹಿಂದಿಕ್ಕಿ ಫ್ರಾನ್ಸ್‌ ಉದ್ಯಮಿ ಅರ್ನಾಲ್ಟ್‌ ವಿಶ್ವದ ನಂ.1 ಶ್ರೀಮಂತ
Share this Article
  • FB
  • TW
  • Linkdin
  • Email

ಸಾರಾಂಶ

ಲೂಯಿಸ್‌ ವಿಟ್ಟನ್‌ ಐಷಾರಾಮಿ ಬ್ರ್ಯಾಂಡ್‌ ಒಡೆಯ ಅರ್ನಾಲ್ಟ್‌ ಆಸ್ತಿ 17.2 ಲಕ್ಷ ಕೋಟಿ ರು.ಗೆ ಏರಿಕೆಯಾಗಿ ವಿಶ್ವದ ನಂ.1 ಶ್ರೀಮಂತ ಆಗಿದ್ದಾರೆ. ಎಲಾನ್‌ ಮಸ್ಕ್‌ ಆಸ್ತಿ 17 ಲಕ್ಷ ಕೋಟಿ ರು.ಗೆ ಕುಸಿತ ಕಂಡಿದ್ದು, 2ನೇ ಸ್ಥಾನಕ್ಕೆ ಜಾರಿದ್ದಾರೆ.

ನವದೆಹಲಿ: ಅಮೆರಿಕದ ಖ್ಯಾತ ಉದ್ಯಮಿ ಎಲಾನ್‌ ಮಸ್ಕ್‌ರನ್ನು ಹಿಂದಿಕ್ಕಿ ಫ್ರಾನ್ಸ್‌ನ ಐಷಾರಾಮಿ ವಸ್ತುಗಳ ಉತ್ಪಾದಕ ಬರ್ನಾರ್ಡ್‌ ಅರ್ನಾಲ್ಟ್‌ ಮತ್ತೊಮ್ಮೆ ಜಗತ್ತಿನ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. 

ಬರ್ನಾರ್ಡ್‌ ಅರ್ನಾಲ್ಟ್‌ ಅವರು ಜಗತ್ಪ್ರಸಿದ್ಧ ಲೂಯಿಸ್‌ ವಿಟ್ಟನ್‌ ಬ್ರ್ಯಾಂಡನ್ನು ಹೊಂದಿರುವ ಎಲ್‌ವಿಎಂಎಚ್‌ ಕಂಪನಿಯ ಮಾಲಿಕರಾಗಿದ್ದಾರೆ.

ಫೋರ್ಬ್ಸ್‌ ನಿಯತಕಾಲಿಕದ ರಿಯಲ್‌ ಟೈಮ್‌ ಶತಕೋಟ್ಯಧಿಪತಿಗಳ ಪಟ್ಟಿಯ ಅನುಸಾರ ಅನಾಲ್ಟ್‌ ಅವರ ಒಟ್ಟು ಆಸ್ತಿ ಶುಕ್ರವಾರ 207.8 ಬಿಲಿಯನ್‌ ಡಾಲರ್‌ (17.2 ಲಕ್ಷ ಕೋಟಿ ರು.)ಗೆ ಏರಿಕೆಯಾಗಿದೆ. 

ಎಲಾನ್‌ ಮಸ್ಕ್‌ರ ಆಸ್ತಿ 204.5 ಬಿಲಿಯನ್‌ ಡಾಲರ್‌ (17 ಲಕ್ಷ ಕೋಟಿ ರು.)ಗೆ ಕುಸಿದಿದೆ. ಮಸ್ಕ್‌ರ ಎಲೆಕ್ಟ್ರಿಕ್‌ ಕಾರು ಉತ್ಪಾದಕ ಕಂಪನಿಯಾದ ಟೆಸ್ಲಾದ ಷೇರುಗಳು ಗುರುವಾರ ಶೇ.13ರಷ್ಟು ಪತನಗೊಂಡಿದ್ದರಿಂದ ಒಂದೇ ದಿನ ಅವರಿಗೆ 18 ಬಿಲಿಯನ್‌ ಡಾಲರ್‌ (1.5 ಲಕ್ಷ ಕೋಟಿ ರು.) ಆಸ್ತಿ ನಷ್ಟವಾಗಿದೆ. 

ಅದೇ ವೇಳೆ, ಎಲ್‌ವಿಎಂಎಚ್‌ ಷೇರುಗಳು ಶೇ.13ರಷ್ಟು ಏರಿಕೆ ಕಂಡಿದ್ದರಿಂದ ಅರ್ನಾಲ್ಟ್‌ ಅವರ ಆಸ್ತಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

74 ವರ್ಷದ ಅನಾಲ್ಟ್‌ ನಾಲ್ಕು ದಶಕಗಳಿಂದ ಎಲ್‌ವಿಎಂಎಚ್‌ ಕಂಪನಿಯನ್ನು ಕಟ್ಟಿ ಅದರ ಸಿಇಒ ಆಗಿದ್ದಾರೆ.