ಸಾರಾಂಶ
ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿರುವ ಕಾರಣ ತಮ್ಮ ಸಂಬಳವನ್ನು ತ್ಯಾಗ ಮಾಡುವುದಾಗಿ ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಘೋಷಿಸಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು, ದೇಶದಲ್ಲಿ ಆರ್ಥಿಕ ದುಸ್ಥಿತಿ ಇರುವ ಕಾರಣ ತಮ್ಮ ಅಧಿಕಾರ ಅವಧಿಯಲ್ಲಿ ಸಂಬಳ ಸ್ವೀಕರಿಸುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.
ಮಂಗಳವಾರ ಈ ಕುರಿತು ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಪಾಕ್ ಅಧ್ಯಕ್ಷರ ಕಚೇರಿ, ‘ದೇಶ ಹಣಕಾಸಿನ ತೊಂದರೆಯಲ್ಲಿರುವಾಗ ನಾವು ವೇತನ ಪಡೆಯುವುದು ಸರಿಯಲ್ಲ. ದೇಶದ ವಿತ್ತೀಯ ಸ್ಥಿತಿ ಮೇಲೆ ಹೆಚ್ಚು ಭಾರ ಕೊಡಬಾರದು. ಈ ನಿಟ್ಟಿನಲ್ಲಿ ಅಧಿಕಾರದ ಅವಧಿಯಲ್ಲಿ ಸಂಬಳ ಸ್ವೀಕರಿಸುವುದಿಲ್ಲ’ ಎಂದು ಹೇಳಿದ್ದಾರೆ.ಇವರೊಂದಿಗೆ ಸಚಿವ ಮೊಹ್ಸಿನ್ ನಕ್ವಿ ಸಹ ಸಂಬಳ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.