ಪಾಕ್‌ನ 14ನೇ ಅಧ್ಯಕ್ಷರಾಗಿ ಆಸಿಫ್‌ ಜರ್ದಾರಿ ಪ್ರಮಾಣ

| Published : Mar 11 2024, 01:20 AM IST / Updated: Mar 11 2024, 07:15 AM IST

ಸಾರಾಂಶ

ಆಸಿಫ್‌ ಅಲಿ ಜರ್ದಾರಿ ಎರಡನೇ ಬಾರಿಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.

ಇಸ್ಲಮಾಬಾದ್‌: ಪಾಕಿಸ್ತಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡನೇ ಬಾರಿಗೆ ರಾಷ್ಟ್ರಾಧ್ಯಕ್ಷರಾಗಿ ಆಸಿಫ್‌ ಅಲಿ ಜರ್ದಾರಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು. 

ಅವರು ದೇಶದ 14ನೇ ಅಧ್ಯಕ್ಷರೂ ಹೌದು.ಅಧ್ಯಕ್ಷರ ನಿವಾಸವಾಗಿರುವ ಐವನ್‌-ಈ-ಸದ್ರ್‌ನಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯ ನ್ಯಾಯಾಧೀಶರಾಗಿರುವ ಖಾಜಿ ಫಯೀಜ್‌ ಇಸಾ ಅವರು ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು. 

ಈ ಕಾರ್ಯಕ್ರಮಕ್ಕೆ ಪ್ರಧಾನಿ ಶಹಬಾಜ್‌ ಷರೀಫ್‌, ಸೇನಾ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾಕ್ಷಿಯಾದರು. ಶನಿವಾರವಷ್ಟೇ ಸ್ಪಷ್ಟ ಬಹುಮತದೊಂದಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಆಸಿಫ್‌, ಇದಕ್ಕೂ ಮೊದಲು 2008-2013ರ ಅವಧಿಯಲ್ಲೂ ಅಧ್ಯಕ್ಷರಾಗಿದ್ದರು.