ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್‌ ಸ್ಪರ್ಧೆಗೆ ಒಬಾಮಾ ದಂಪತಿ ಅಸ್ತು

| Published : Jul 27 2024, 12:59 AM IST / Updated: Jul 27 2024, 04:02 AM IST

ಸಾರಾಂಶ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಸ್ಪರ್ಧೆಗೆ ಅಮೆರಿಕದ ಮಾಜಿ ಅಧ್ಯಕ್ಷ ನಾಯಕ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್ ಒಬಾಮಾ ಅನುಮೋದಿಸಿದ್ದಾರೆ.

ಅಟ್ಲಾಂಟಾ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಸ್ಪರ್ಧೆಗೆ ಅಮೆರಿಕದ ಮಾಜಿ ಅಧ್ಯಕ್ಷ ನಾಯಕ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್ ಒಬಾಮಾ ಅನುಮೋದಿಸಿದ್ದಾರೆ. ಈ ಮೂಲಕ ಕಮಲಾ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಇದಲ್ಲದೆ, ರಿಪಬ್ಲಿಕನ್‌ ಪಾರ್ಟಿ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸ್ಪರ್ಧಿಸಲು ಕಮಲಾಗೆ ಭೀಮಬಲ ಬಂದಂತಾಗಿದೆ.

ಶುಕ್ರವಾರ ಬರಾಕ್ ಒಬಾಮಾ ಮತ್ತು ಮಿಶೆಲ್ ದಂಪತಿಗಳು ಕಮಲಾ ಹ್ಯಾರಿಸ್‌ ಸ್ಪರ್ಧೆಗೆ ದೂರವಾಣಿ ಕರೆ ಮಾಡಿ ಅನುಮೋದಿಸಿದ್ದಾರೆ. ಅಲ್ಲದೇ‘ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ. ಚುನಾವಣೆಗೆ ಬೇಕಾದ ಬೆಂಬಲ ನೀಡುತ್ತೇವೆ. ಇದು ಐತಿಹಾಸಿಕವಾಗಲಿದೆ’ ಎಂದು ಇಬ್ಬರು ಕೂಡ ಹೇಳಿಕೊಂಡಿದ್ದಾರೆ. ಕಮಲಾ ಹಾಗೂ ಒಬಾಮಾ ದಂಪತಿ ಫೋನ್‌ನಲ್ಲಿ ಮಾತಾಡುವ ವಿಡಿಯೋ ವೈರಲ್‌ ಆಗಿದೆ.

ಇತ್ತೀಚೆಗೆ ಸ್ಪರ್ಧೆ ಕಣದಿಂದ ಹಿಂದೆ ಸರಿದ ಜೋ ಬೈಡನ್ ಕಮಲಾಗೆ ಹ್ಯಾರಿಸ್‌ಗೆ ಬೆಂಬಲವನ್ನು ಸೂಚಿಸಿದ್ದರು. ಆದರೆ ಒಬಾಮಾ ಮಾತ್ರ ಮೌನ ವಹಿಸಿ ಕುತೂಹಲಕ್ಕೆ ಕಾರರಣರಾಗಿದ್ದರು. ಅಲ್ಲದೆ, ಕಮಲಾ ಪರ ಒಬಾಮಾಗೆ ಮನಸ್ಸಿಲ್ಲ ಎಂಬ ಸುದ್ದಿಗಳೂ ಹರಿದಾಡಿದ್ದವು. ಆದರೆ ಇದೀಗ ಒಬಾಮಾ ಕಮಲಾಗೆ ಬೆಂಬಲ ಘೋಷಿಸಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಟ್ರಂಪ್ ಎದುರು ಚುನಾವಣೆಗೆ ನಿಲ್ಲುವುದು ಬಹುತೇಕ ಖಚಿತವಾದಂತಾಗಿದೆ.