ಬಿಬಿಸಿಯಲ್ಲಿ ಖಲಿಸ್ತಾನಿ ಪರ ಸುದ್ದಿವಾಚಕಿ: ಭಾರತ ಸಂಜಾತರ ಆಕ್ಷೇಪ

| Published : Mar 10 2024, 01:31 AM IST

ಸಾರಾಂಶ

ಬಿಬಿಸಿ ಸುದ್ದಿವಾಚಕಿಯಾಗಿ ಇತ್ತೀಚೆಗೆ ಸೇರಿಕೊಂಡಿರುವ ಜಸ್‌ಪ್ರೀತ್‌ ಕೌರ್‌ ಖಲಿಸ್ತಾನಿ ಪರ ಬರಹಗಳನ್ನು ಬರೆದು ಪ್ರಕಟಿಸಿರುವ ಕುರಿತು ಭಾರತೀಯ ಸಂಜಾತರಿಂದ ಆಕ್ಷೇಪ ವ್ಯಕ್ತವಾಗಿದೆ.

ಲಂಡನ್‌: ಜಗತ್ತಿನ ಖ್ಯಾತ ಸುದ್ದಿ ಮಾಧ್ಯಮವಾದ ಬಿಬಿಸಿಯಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿ ಸುದ್ದಿವಾಚಕಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸುದ್ದಿವಾಚಕಿ ವಜಾಗೆ ಬ್ರಿಟನ್‌ನ ಭಾರತೀಯ ಸಂಜಾತರು ಆಗ್ರಹಿಸಿದ್ದಾರೆ.

ಬಿಬಿಸಿ ಏಷ್ಯಾ ನೆಟ್‌ವರ್ಕ್‌ ವಿಭಾಗಕ್ಕೆ ನಿರೂಪಕಿ ಜಸ್‌ಪ್ರೀತ್‌ ಕೌರ್‌ ಇತ್ತೀಚೆಗೆ ಸೇರಿಕೊಂಡಿದ್ದಾರೆ. ಈಕೆ ಈ ಹಿಂದೆ ತಮ್ಮ ಟ್ವೀಟರ್ ಖಾತೆಯಲ್ಲಿ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಖಲಿಸ್ತಾನಿ ಪರ ಬರಹ ಬರೆದಿದ್ದರು. ಈ ಎಲ್ಲ ಪೋಸ್ಟ್‌ಗಳು ಸುದ್ದಿ ವಾಚಕಿಯಾಗಿ ಆಯ್ಕೆಯಾದ ಬೆನ್ನಲ್ಲೆ ಹೆಚ್ಚು ವೈರಲ್‌ ಆಗಿವೆ. ಹೀಗಾಗಿ ಇವರ ವಿರುದ್ಧ ಅನಿವಾಸಿ ಭಾರತೀಯರು, ಬಿಬಿಸಿಯ ಭಾರತ ಮೂಲದ ಮುಖ್ಯಸ್ಥ ಸಮೀರ್‌ ಶಾ ಅವರಿಗೆ ದೂರು ನೀಡಿದ್ದಾರೆ. ದೂರುಗಳನ್ನು ಪರಿಶೀಲಿಸುತ್ತೇವೆ ಎಂದು ಬಿಬಿಸಿ ಹೇಳಿದೆ.